ಕಲಬುರಗಿ: ಕಾರು ಚಾಲಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಜಿಲ್ಲಾ ನ್ಯಾಯಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಕಾರು ಬಾಡಿಗೆ ಪಡೆದು ಹೊರಟಾಗ ಮಾರ್ಗಮಧ್ಯೆ ಚಾಲಕ ಶರಣಬಸಪ್ಪ ಎಂಬುವರನ್ನು ಆಳಂದ ತಾಲೂಕಿನ ಮುದ್ದಡಗಾ ಗ್ರಾಮದ ಶ್ರೀಶೈಲ ನಾಗಪ್ಪ ಹರಳಯ್ಯ, ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕು ಹನಮಂತವಾಡಿ ಗ್ರಾಮದ ಸಂದೀಪ ರಾಜಣ್ಣ ಸೀತಾಳಗೇರಿ ಎಂಬ ಇಬ್ಬರು ಆರೋಪಿಗಳು ಈ ಹತ್ಯೆ ಮಾಡಿದ್ದರು.
ಇದೀಗ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂಪಾಯಿ ದಂಡ, ಸಾಕ್ಷಿ ನಾಶಕ್ಕೆ 7 ವರ್ಷ ಸಾಧಾರಣ ಶಿಕ್ಷೆ ಮತ್ತು ತಲಾ 5 ಸಾವಿರ ದಂಡ ವಿಧಿಸಿದೆ. ದಂಡದ ಹಣದಲ್ಲಿ 75 ಸಾವಿರವನ್ನು ಮೃತನ ಕುಟುಂಬಕ್ಕೆ ನೀಡುವಂತೆ ಆದೇಶಿಸಿದೆ.
ಕಾರು ಕದಿಯಲು ಕೊಲೆ:
2017 ರಂದು ವಿಜಯಪುರ ಕಡೆಗೆ ಕಾರಿನಲ್ಲಿ ಹೊರಟಾಗ ರಾತ್ರಿ ಸುಮಾರು 10.30ಕ್ಕೆ ಎಸ್.ಎನ್. ಹಿಪ್ಪರಗಿ ಕ್ರಾಸ್ ಬಳಿ ಚಾಲಕ ಶರಣಬಸಪ್ಪನನ್ನು ಕೊಲೆ ಮಾಡಿ, ರಸ್ತೆ ಪಕ್ಕ ಎಸೆದು ನಂತರ ಕಾರಿನೊಂದಿಗೆ ಎಸ್ಕೇಪ್ ಆಗಿದ್ದರು. ಕಾರಿನ ದಾಖಲೆಗಳು ಸರಿ ಇಲ್ಲದ ಕಾರಣ ಯಾರೂ ಕಾರು ಖರೀದಿಸಲಿಲ್ಲ. ಕೆಲ ದಿನಗಳ ನಂತರ ಕಾರು ಮಾರಾಟವಾಗದಿದ್ದಾಗ ಬಸವ ಕಲ್ಯಾಣ ಬಳಿ ಪೆಟ್ರೋಲ್ ಹಾಕಿ ಕಾರನ್ನು ಸುಟ್ಟು ಹಾಕಿದ್ರು. ಕೃತ್ಯದ ವೇಳೆ ಬಳಸಿದ್ದ ಸಿಮ್ ಕಾರ್ಡ್‌ಗಳನ್ನು ನಾಶ ಮಾಡಿ, ಸಾಕ್ಷಿ ನಾಶ ಮಾಡಿದ್ರು. ಎಷ್ಟೇ ಪ್ರಯತ್ನಿಸಿದ್ದರೂ ಕೂಡ ಆರೋಪಿಗಳು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಆಗಿರಲಿಲ್ಲ.
ಇದೀಗ ಪ್ರಕರಣ ಕೈಗೆತ್ತಿಕೊಂಡಿರುವ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಆರೋಪಿಗಳು ಜೈಲಿನಲ್ಲೇ ಮುದ್ದೆ ಮುರಿಯುವಂತಾಗಿದೆ.