ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಬಗೆದಷ್ಟು ಆಳಕ್ಕೆ ಹೋಗ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಗನ್‌ಮ್ಯಾನ್ ಸೇರಿ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಸಿಟಿ ಆರ್ಮ್ಸ್ ರಿಸರ್ವ್ (ಸಿಎಆರ್) ಪೊಲೀಸ್ ಪೇದೆ ರುದ್ರಗೌಡ ಮತ್ತು ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಗನ್‌ಮ್ಯಾನ್ ಅಯ್ಯಣ್ಣ ದೇಸಾಯಿ ಬಂಧಿತರು.
ಶಾಸಕರ ಗನ್‌ಮ್ಯಾನ್ ಅಯ್ಯಣ್ಣ ದೇಸಾಯಿ ಪಿಎಸ್ಐ ಪರೀಕ್ಷೆ ಬರೆದಿದ್ದ. ಆದರೆ, ರುದ್ರಗೌಡ ಪರೀಕ್ಷೆ ಬರೆದಿರಲಿಲ್ಲ. ಈತನ ಪಾತ್ರ ಏನು ಅನ್ನೋದನ್ನು ತಿಳಿಯಲು ವಿಚಾರಣೆ ನಡೆಯುತ್ತಿದೆ. ಅಯ್ಯಣ್ಣ ದೇಸಾಯಿ ಆರ್ಥಿಕವಾಗಿ ಸದೃಢನಲ್ಲದಿದ್ದರೂ 30-40 ಲಕ್ಷ ರೂಪಾಯಿ ಹೇಗೆ ಅಡ್ಜೆಸ್ಟ್ ಮಾಡಿದ್ದ? ಇದರಲ್ಲಿ ಶಾಸಕ ಎಂ. ವೈ. ಪಾಟೀಲ್ ಪ್ರಭಾವ ಏನಾದ್ರೂ ನಡೆದಿದೆಯಾ? ಅನ್ನೋದನ್ನೂ ಕೂಡ ಸಿಐಡಿ ವಿಚಾರಣೆ ನಡೆಸುತ್ತಿದೆ.
ಈ ಮೂಲಕ ಇಲ್ಲಿವರೆಗೆ ಬಿಜೆಪಿ ನಾಯಕರ ಸುತ್ತ ಸುತ್ತುತ್ತಿದ್ದ ಅಕ್ರಮ ಈಗ ಕಾಂಗ್ರೆಸ್ ಪಕ್ಷಕ್ಕೂ ಅಂಟಿಕೊಂಡಿದೆಯಾ? ಎನ್ನುವ ಅನುಮಾನ ಕಾಡುತ್ತಿದೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ಎಐಎಂಐಎಂ ಮುಖಂಡ ಪೊಲೀಸರ ವಶಕ್ಕೆ