ETV Bharat / state

ಮರಾಠಿಮಯ ಕಾರ್ಯಕ್ರಮ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಟಿ‌‌ ಎಸ್ ನಾಗಾಭರಣ - ಶಶಿಕಲಾ ಜೊಲ್ಲೆ ಮರಾಠಿ‌ಯಲ್ಲಿ ಭಾಷಣ

ಬರೀ ಬಾಯಿ ಮಾತಿನಿಂದ ಕನ್ನಡ ಬೆಳೆಸಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಕನ್ನಡ ಬಗ್ಗೆ ಅದರದೇ ಆದ ವಿಶೇಷ ಕಾಳಜಿ, ಮನಸ್ಸು ಇರಬೇಕು. ಆಗ ಮಾತ್ರ ಕನ್ನಡ ಭಾಷೆ ಉಳಿಸಿ-ಬೆಳೆಸಲು ಸಾಧ್ಯವಿದೆ. ಕನ್ನಡಕ್ಕೆ ಅಪಮಾನಕರ ಸಂಗತಿ ಎಲ್ಲೇ ನಡೆದ್ರೂ, ಯಾರೇ ನಡೆಸಿದ್ರೂ ಸಹಿಸಲು ಸಾಧ್ಯವಿಲ್ಲ..

nagabharana
nagabharana
author img

By

Published : Jan 19, 2021, 3:23 PM IST

ಕಲಬುರಗಿ : ಬೆಳಗಾವಿ ಜಿಲ್ಲೆಯಲ್ಲಿ ಮರಾಠಿಮಯ ಕಾರ್ಯಕ್ರಮ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿವರಣೆ ಕೇಳಿ ಪತ್ರ ಬರೆಯುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ‌ ಎಸ್ ನಾಗಾಭರಣ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ನಾಗಾಭರಣ, ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮರಾಠಿ‌ಯಲ್ಲಿ ಭಾಷಣ ಮಾಡಿದ್ದಾರೆ. ಕಾರ್ಯಕ್ರಮ ಸ್ವಾಗತದಿಂದ ಹಿಡಿದು ಸಮಾರೋಪದವರೆಗೆ ಮರಾಠಿ ಭಾಷೆಯಲ್ಲಿ ನಡೆದಿದೆ.

ಬರೀ ಬಾಯಿ ಮಾತಿನಿಂದ ಕನ್ನಡ ಬೆಳೆಸಲು ಸಾಧ್ಯವಿಲ್ಲ ಅಂತಾರೆ ಟಿ ಎಸ್ ನಾಗಾಭರಣ..

ಕನ್ನಡ ರಾಜ್ಯದಲ್ಲಿ, ಮೇಲಾಗಿ ಗಡಿ ಭಾಗದ ಗಲಾಟೆ ನಡೆಯುತ್ತಿರುವ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷೆಯಲ್ಲಿ ಕಾರ್ಯಕ್ರಮ ನಡೆಸುವುದು ಸಮಂಜಸವಲ್ಲ. ಈ ಕುರಿತು ವಿವರಣೆ ಕೇಳಿ ಪತ್ರ ಬರೆಯುತ್ತೇನೆ ಎಂದರು.

ಬರೀ ಬಾಯಿ ಮಾತಿನಿಂದ ಕನ್ನಡ ಬೆಳೆಸಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಕನ್ನಡ ಬಗ್ಗೆ ಅದರದೇ ಆದ ವಿಶೇಷ ಕಾಳಜಿ, ಮನಸ್ಸು ಇರಬೇಕು. ಆಗ ಮಾತ್ರ ಕನ್ನಡ ಭಾಷೆ ಉಳಿಸಿ-ಬೆಳೆಸಲು ಸಾಧ್ಯವಿದೆ. ಕನ್ನಡಕ್ಕೆ ಅಪಮಾನಕರ ಸಂಗತಿ ಎಲ್ಲೇ ನಡೆದ್ರೂ, ಯಾರೇ ನಡೆಸಿದ್ರೂ ಸಹಿಸಲು ಸಾಧ್ಯವಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.