ETV Bharat / state

ಲಾಕ್​​​​ಡೌನ್​​ ನಡುವೆ ಕಿರಾಣಿ ಅಂಗಡಿ ಲೂಟಿ ಮಾಡಿದ ಮಾಸ್ಕ್​ಧಾರಿ ಕಳ್ಳರು - New Raghavendra nagara Police Station

ರಾತ್ರಿ ವೇಳೆ ಮಾಸ್ಕ್​ ಧರಿಸಿದ್ದ ಕಳ್ಳರು ಅಂಗಡಿ ಶೆಟರ್​​ ಮುರಿದು ಕೌಂಟರ್​​​ನಲ್ಲಿಟ್ಟಿದ್ದ ₹80 ಸಾವಿರ ನಗದು, 50 ಸಾವಿರ ಮೌಲ್ಯದ ಅಂಗಡಿಯಲ್ಲಿ ಸಾಮಗ್ರಿಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ..

Thieves who robbed the grocery store between the lockdown wearing a mask
ಲಾಕ್​​​​ಡೌನ್​​ ನಡುವೆ ಕಿರಾಣಿ ಅಂಗಡಿ ಲೂಟಿ ಮಾಡಿದ ಮಾಸ್ಕ್​ಧಾರಿ ಕಳ್ಳರು
author img

By

Published : Jul 21, 2020, 7:29 PM IST

ಕಲಬುರಗಿ : ಜಿಲ್ಲೆಯಲ್ಲಿ ಕೊರೊನಾ ಭೀತಿ ಹಿನ್ನೆಲೆ ಲಾಕ್​ಡೌನ್​​ ಜಾರಿಯಲ್ಲಿದೆ. ಈ ಮಧ್ಯೆ ರಾತ್ರೋರಾತ್ರಿ ಮಾಸ್ಕ್‌ಧಾರಿ ಕಳ್ಳರು ಹೋಲ್‌ಸೇಲ್ ಕಿರಾಣಿ ಅಂಗಡಿಗೆ ಕನ್ನ ಹಾಕಿರುವ ಘಟನೆ ನಡೆದಿದೆ.

ಲಾಕ್​​​​ಡೌನ್​​ ನಡುವೆ ಕಿರಾಣಿ ಅಂಗಡಿ ಲೂಟಿ ಮಾಡಿದ ಮಾಸ್ಕ್​ಧಾರಿ ಕಳ್ಳರು

ಇಲ್ಲಿನ ಮಿಸಬಾ ನಗರದಲ್ಲಿರುವ ಬಿಸ್ಮಿಲ್ಲಾ ಬೇಗ್ ಕಿರಾಣಿ ಅಂಗಡಿಗೆ ನಾಲ್ವರು ಖದೀಮರು ಕನ್ನ ಹಾಕಿದ್ದಾರೆ. ರಾತ್ರಿ ವೇಳೆ ಮಾಸ್ಕ್​ ಧರಿಸಿದ್ದ ಕಳ್ಳರು ಅಂಗಡಿ ಶೆಟರ್​​ ಮುರಿದು ಕೌಂಟರ್​​​ನಲ್ಲಿಟ್ಟಿದ್ದ ₹80 ಸಾವಿರ ನಗದು, 50 ಸಾವಿರ ಮೌಲ್ಯದ ಅಂಗಡಿಯಲ್ಲಿ ಸಾಮಗ್ರಿಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಕಳ್ಳರ ಕೈಚಳಕ ಅಂಗಡಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.