ಕಲಬುರಗಿ: ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕ ವಿಚಾರ ರಾಜ್ಯಾದ್ಯಂತ ಸದ್ದು ಮಾಡ್ತಿದೆ. ಈ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ಸಮರ ನಡೆಯುತ್ತಿರುವ ಈ ಹೊತ್ತಿನಲ್ಲೇ ಸಿಎಂ ಯಡಿಯೂರಪ್ಪ ಪರೋಕ್ಷವಾಗಿ ಹೆಚ್ಡಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಿಎಂ, ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಒಪ್ಪಿಗೆ ನೀಡಿರುವ ಬಗ್ಗೆ ನನಗೆ ಸಮಾಧಾನವಿದೆ ಎಂದು ಹೇಳುವ ಮೂಲಕ ಹೆಚ್ಡಿಕೆಗೆ ತಿರುಗೇಟು ನೀಡಿದ್ದಾರೆ. ಮಂಡ್ಯ ರಾಜ್ಯದ ಒಂದು ಭಾಗ. ಅದರ ಅಭಿವೃದ್ಧಿಗೂ ನಾವು ಒತ್ತು ಕೊಡಬೇಕು. ಅದನ್ನು ಬಿಟ್ಟು ಸುಮಲತಾ- ಕುಮಾರಸ್ವಾಮಿ ಈ ರೀತಿ ಕಚ್ಚಾಡುವುದು ಸರಿಯಲ್ಲ. ಎಲ್ಲರೂ ಸಹೋದರರಂತೆ ಬಾಳುವುದನ್ನು ಕಲಿಯಬೇಕು. ಅಲ್ಲಿನ ಅಭಿವೃದ್ಧಿಗೆ ಒಟ್ಟಾಗಿ ದುಡಿಯಬೇಕು ಎಂದು ಸಲಹೆ ಕೊಟ್ಟರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಿಲ್ಲ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಅಂತಾ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಅಥವಾ ಸಚಿವರನ್ನು ಕೈ ಬಿಡುವ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ ಎಂದರು.
ಇದನ್ನೂ ಓದಿ:ಮಹಿಳೆಯರು ಅಧಿಕಾರದಲ್ಲಿರೋದನ್ನ ಕೆಲವರು ಸಹಿಸಲ್ಲ: ಟ್ವೀಟ್ ಮೂಲಕ HDKಗೆ ಕುಟುಕಿದ ಸುಮಲತಾ