ಕಲಬುರಗಿ: ಸಿಎಂ ಬಿ ಎಸ್ ಯಡಿಯೂರಪ್ಪ ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಲ್ಲಿ ಯಶಸ್ವಿಯಾಗಲಿ ಎಂದು ಕೋರಂಟಿ ಹನುಮಾನ್ ದೇವಸ್ಥಾನದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ.
ವೀರಶೈವ-ಲಿಂಗಾಯತ ಸ್ವಾಭಿಮಾನಿ ಬಳಗದ ಅಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಬಿಎಸ್‌ವೈ ಅಭಿಮಾನಿಗಳು, ಸದನದಲ್ಲಿ ಇಂದು ಯಡಿಯೂರಪ್ಪ ಬಹುಮತ ಸಾಬೀತುಪಡಿಸಿ ಅವಧಿ ಪೂರ್ಣ ಸರ್ಕಾರವನ್ನ ಯಶಸ್ವಿಯಾಗಿ ನಡೆಸಲಿ ಎಂದು ಪ್ರಾರ್ಥಿನೆ ಸಲ್ಲಿಸಿದರು.
ಅಲ್ಲದೆ ಸರ್ಕಾರ ಯಶಸ್ವಿಯಾಗಿ ಅವಧಿಪೂರ್ಣ ನಡೆಸಲಿ, ಮಧ್ಯೆದಲ್ಲಿ ಯಾವುದೇ ವಿಘ್ನಗಳು ಬಾರದಿರಲಿ ಎಂದು ಕೋರಂಟಿ ಹನುಮಾನ ದೇವರಿಗೆ ಈಡುಗಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು.