ಕಲಬುರಗಿ: ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಮಾತಾ ಮಾಣಿಕೇಶ್ವರಿ ಅಮ್ಮನವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಆದರೆ, ಧಾರಾಕಾರ ಮಳೆ ಸುರಿಯುತ್ತಿದ್ದು, ದರ್ಶನಕ್ಕೆ ಅಡ್ಡಿ ಪಡಿಸಿದೆ. ಮಳೆಯ ನಡುವೆಯೇ ಭಕ್ತರು ಭಜನೆ ಮುಂದುವರೆಸಿದ್ದಾರೆ.
ಮಳೆಯ ಕಾರಣ ಮಾಣಿಕೇಶ್ವರಿ ಮಠದ ಮಹಾದ್ವಾರದ ಬಳಿ ಇಟ್ಟಿರೋ ಮಾತೆಯ ಪಾರ್ಥೀವ ಶರೀರವನ್ನು ದ್ವಾರ ಬಾಗಿಲಿನ ಒಳಗಡೆ ಇಡಲಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಅಂತಿಮ ದರ್ಶನ ಅಸ್ತವ್ಯಸ್ತವಾಗೋ ಆತಂಕ ಎದುರಾಗಿದ್ದು, ಭಕ್ತರು ದೇವಸ್ಥಾನದಲ್ಲಿಯೇ ಆಶ್ರಯ ಪಡೆದಿದ್ದಾರೆ.