ಕಲಬುರಗಿ: ಅತಿ ಹೆಚ್ಚು ತೊಗರಿ ಬೆಳೆಯುವ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಸೇರಿದಂತೆ ಬಾಗಲಕೋಟೆ ಜಿಲ್ಲೆಗಳಲ್ಲಿ ಈಗಾಗಲೇ ತೊಗರಿ ಖರೀದಿ ಕೇಂದ್ರ ತೆರೆಯಲು ಸಿದ್ಧತೆಗಳು ನಡೆದಿವೆ.
ತೊಗರಿ ಕಣಜದ ನಾಡು ಎಂದೆ ಪ್ರಸಿದ್ದಿ ಪಡೆದಿರುವ ಕಲಬುರಗಿ ಜಿಲ್ಲೆಯೊಂದರಲ್ಲೇ 56 ಲಕ್ಷ ಕ್ವಿಂಟಾಲ್ ಇಳುವರಿ ಬರಬಹುದು ಎಂಬ ನಿರೀಕ್ಷೆ ಅಧಿಕಾರಿಗಳದ್ದಾಗಿದೆ. ಒಟ್ಟು 1,82,875 ಮೆಟ್ರಿಕ್ ಟನ್ನಷ್ಟು ತೊಗರಿ ಖರೀದಿಗೆ ಅನುಮತಿ ನೀಡಲಾಗಿದೆ. 90 ದಿನಗಳ ಅವಧಿಯಲ್ಲಿ ಬೆಂಬಲ ಬೆಲೆಯಡಿ ಪ್ರಕ್ರಿಯೆ ನಡೆಯಲಿದೆ ಎಂದು ಎಮ್.ಎಸ್.ಪಿ ನಿರ್ದೇಶಕ ಶಶಿಭೂಷಣ್ ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಒಟ್ಟಾರೆ ಹಲವು ದಿನಗಳ ಹೋರಾಟದ ಬಳಿಕ ತೊಗರಿ ಕಣಜದ ರೈತರ ಬೇಡಿಕೆ ಈಡೇರಿದಂತಾಗಿದೆ.