ETV Bharat / state

ಧಾರಾಕಾರ ಮಳೆಯ ನಡುವೆಯೂ ಬಸ್​ಗಾಗಿ ವಿದ್ಯಾರ್ಥಿನಿಯರ ಪ್ರತಿಭಟನೆ - ಮಳೆಯ ನಡುವೆಯೂ ಬಸ್​ಗಾಗಿ ವಿದ್ಯಾರ್ಥಿನಿಯರ ಪ್ರತಿಭಟನೆ ಸುದ್ದಿ

ಸೇಡಂ ತಾಲೂಕಿನ ಬೊಂದೆಂಪಲ್ಲಿ, ಮಲ್ಲಾಬಾದ, ಖಂಡೇರಾಯನಪಲ್ಲಿ, ಬೊಂದೆಂಪಲ್ಲಿ ತಾಂಡಾ ಸೇರಿದಂತೆ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಮುಧೋಳ ಗ್ರಾಮಕ್ಕೆ ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಆದರೆ ಸರಿಯಾದ ಬಸ್ ಸೌಲಭ್ಯ ಇಲ್ಲದ ಕಾರಣ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಬಸ್​ ವ್ಯವಸ್ಥೆ ಕಲ್ಪಿಸುವಂತೆ ಭಾರೀ ಮಳೆಯನ್ನೂ ಲೆಕ್ಕಿಸದೇ ಬಸ್​ಗೆ ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಿದರು.

ಧಾರಾಕಾರ ಮಳೆಯ ನಡುವೆಯೂ ಬಸ್​ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

author img

By

Published : Sep 21, 2021, 7:50 PM IST

ಸೇಡಂ (ಕಲಬುರಗಿ): ಬಸ್ ಸೌಲಭ್ಯ ಕಲ್ಪಿಸುವಂತೆ ಭಾರೀ ಮಳೆಯನ್ನೂ ಲೆಕ್ಕಿಸದೇ ಬಸ್​ಗೆ ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಿದರು. ಸರಿಯಾದ ಸಮಯಕ್ಕೆ ಬಸ್ ಇಲ್ಲದ ಪರಿಣಾಮ, ನಾವು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಘಟನೆ ತಾಲೂಕಿನ ಮುಧೋಳ ಗ್ರಾಮದಲ್ಲಿ ಜರುಗಿದೆ. ನಮಗೆ ಬಸ್ ನೀಡಿ ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದರು.

ಸೇಡಂ ತಾಲೂಕಿನ ಬೊಂದೆಂಪಲ್ಲಿ ಗ್ರಾಮದಿಂದ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸದ ಪರಿಣಾಮ ರೋಸಿಹೋದ ವಿದ್ಯಾರ್ಥಿನಿಯರು ಮುಧೋಳ ಬಸ್ ನಿಲ್ದಾಣದಲ್ಲಿ ಗುರುಮಠಕಲ ಬಸ್ ತಡೆದು, ಮಳೆಯಲ್ಲೇ ಪ್ರತಿಭಟಿಸಿದ್ದಾರೆ.

ಧಾರಾಕಾರ ಮಳೆಯ ನಡುವೆಯೂ ಬಸ್​ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ
ಧಾರಾಕಾರ ಮಳೆಯ ನಡುವೆಯೂ ಬಸ್​ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಬೊಂದೆಂಪಲ್ಲಿ, ಮಲ್ಲಾಬಾದ, ಖಂಡೇರಾಯನಪಲ್ಲಿ, ಬೊಂದೆಂಪಲ್ಲಿ ತಾಂಡಾ ಸೇರಿದಂತೆ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಮುಧೋಳ ಗ್ರಾಮಕ್ಕೆ ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಆದರೆ ಅನೇಕ ಗ್ರಾಮಗಳಿಂದ ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಇಲ್ಲ.

ಸುಮಾರು ಐದಾರು ಕಿ.ಮೀ ನಡೆದುಕೊಂಡೇ ಹೋಗಿ ಬಸ್ ಹಿಡಿಯುವ ದುಸ್ಥಿತಿ ಇದೆ. ಇದಕ್ಕಾಗಿ ಹಲವಾರು ಬಾರಿ ಕೋರಿದರೂ ಬಸ್ ಸೌಲಭ್ಯ ಕಲ್ಪಿಸಿಲ್ಲ ಎಂಬುದು ಗ್ರಾಮಸ್ಥರು ಆರೋಪಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.