ETV Bharat / state

' ಅಮ್ಮಾ ಆನ್‌ಲೈನ್ ಕ್ಲಾಸ್ ಇದೆ ಡಿಸ್ಟರ್ಬ್ ಮಾಡಬೇಡಿ' ಎಂದು ರೂಮ್ ಸೇರಿದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು - ಕಲಬುರಗಿ ವಿದ್ಯಾರ್ಥಿ ಆತ್ಮಹತ್ಯೆ

ಕಲಬುರಗಿ ಜಿಲ್ಲೆ ವಾಡಿ ಪಟ್ಟಣದಲ್ಲಿ ಪಿಯುಸಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Student Suicide in Kalburgi
ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
author img

By

Published : Aug 18, 2021, 10:42 AM IST

Updated : Aug 18, 2021, 3:48 PM IST

ಕಲಬುರಗಿ: ಆನ್​ಲೈನ್​ ಕ್ಲಾಸ್ ಇದೆ ಎಂದು ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕು ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್‌ನಲ್ಲಿ ನಡೆದಿದೆ.

ವಾಡಿಯಲ್ಲಿರುವ ಬೆಂಗಳೂರು ಬೇಕರಿಯ ಗಿರೀಶ್​ ಉಡುಪ ಅವರ ಪುತ್ರ ಗುರುಚರಣ್ ಉಡುಪ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಉಡುಪಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್‌

ನಿನ್ನೆ (ಆಗಸ್ಟ್ 17 ) ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಅಮ್ಮಾ ನನಗೆ ಆನ್​ಲೈನ್ ಕ್ಲಾಸ್​ ಇದೆ, ಯಾರೂ ಡಿಸ್ಟರ್ಬ್​ ಮಾಡಬೇಡಿ ಎಂದು ಹೇಳಿದ್ದ ಗುರುಚರಣ್, ರೂಮ್ ಒಳಗೆ ಹೋಗಿ ಲಾಕ್ ಮಾಡಿಕೊಂಡಿದ್ದ. ಎರಡು ಗಂಟೆಯಾದರೂ ಆತ ಹೊರ ಬರದಿರುವುದನ್ನು ಕಂಡ ಪೋಷಕರು ಬಾಗಿಲು ಬಡಿದಿದ್ದರು. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡು ಕೋಣೆಯ ಬಾಗಿಲು ಒಡೆದು ನೋಡಿದಾಗ ಗುರುಚರಣ್ ಫ್ಯಾನ್​ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ.

ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ, ಯಾವುದೇ ದೂರು ದಾಖಲಾಗಿಲ್ಲ. ಈಗಾಗಲೇ ಅಂತ್ಯಕ್ರಿಯೆ ನಡೆದಿದೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Last Updated : Aug 18, 2021, 3:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.