ಕಲಬುರಗಿ: ಸಚಿವ ಕೆ.ಎಸ್. ಈಶ್ವರಪ್ಪನವರ ವರ್ತನೆ ಬಿಜೆಪಿಯ ಸಂಸ್ಕೃತಿಯನ್ನು ಸೂಚಿಸುತ್ತದೆ. ಈಶ್ವರಪ್ಪ ಎಂಬ ಹೆಸರು ನನ್ನ ಬಾಯಿಂದ ಬಂದ್ರೆ ಬಾಯಿಯೇ ಮಲಿನವಾಗುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರು ಮಂಗಳವಾರ ಕಾಂಗ್ರೆಸ್ನವರ ಕುರಿತು ನೀಡಿದ ಹೇಳಿಕೆಗೆ ಗರಂ ಆದ್ರು. ಉಪಮುಖ್ಯಮಂತ್ರಿಯಾದವರು ಹೀಗೆ ಮಾತನಾಡುವುದು ಒಳಿತಲ್ಲ. ಸಂಸ್ಕೃತಿ ಮತ್ತು ಸಂಸ್ಕಾರ ಎರಡೂ ಅವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಸಚಿವರಾಗಿ ಇಂತಹ ಹೇಳಿಕೆ ನೀಡುವುದು ಸೂಕ್ತವಲ್ಲ, ಅವರ ಮೆದುಳಿಗೆ ಹಾಗೂ ನಾಲಿಗೆಗೆ ಇರುವ ಕನೆಕ್ಷನ್ ಕಟ್ ಆಗಿದೆ ಎಂದು ವ್ಯಂಗ್ಯವಾಡಿದರು.