ETV Bharat / state

ಕಲಬುರಗಿ: ನೇಣು ಬಿಗಿದುಕೊಂಡು ಅಕ್ಕ-ತಂಗಿ ಆತ್ಮಹತ್ಯೆ

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಂದೇ ಮನೆಯಲ್ಲಿ ಅಕ್ಕ ತಂಗಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಬುರಗಿ ಜಿಲ್ಲೆಯ ಐನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

sisters commits suicide
ಐಶ್ವರ್ಯ ಸುತಾರ ಹಾಗೂ ಸಾರಿಕಾ ಸುತಾರ
author img

By

Published : Dec 8, 2020, 2:04 PM IST

Updated : Dec 8, 2020, 6:58 PM IST

ಕಲಬುರಗಿ: ಒಂದೇ ಮನೆಯಲ್ಲಿ ಅಕ್ಕ, ತಂಗಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ.

ಐಶ್ವರ್ಯ ಸುತಾರ (20) ಹಾಗೂ ಸಾರಿಕಾ ಸುತಾರ (17) ಆತ್ಮಹತ್ಯೆಗೆ ಶರಣಾದ ಸಹೋದರಿಯರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ತಂದೆ ವಿಶ್ವನಾಥ ಸುತಾರ ಐನಾಪುರ ಗ್ರಾಮದಲ್ಲಿ ಪೆಟ್ಟಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಇವರಿಗೆ ಐವರು ಮಕ್ಕಳಿದ್ದು ಮೂವರ ಮದುವೆಯಾಗಿದೆ. ಐದನೆಯವಳಾದ ಸಾರಿಕಾಗೆ ತಿಂಗಳ ಹಿಂದಷ್ಟೆ ಮದುವೆ ನಿಶ್ಚಯವಾಗಿತ್ತು. ನಾಲ್ಕನೆಯವಳಾದ ಐಶ್ವರ್ಯಗೆ ಗಂಡು ಹುಡುಕಲಾಗುತಿತ್ತು ಎನ್ನಲಾಗ್ತಿದೆ.

ವಿಶ್ವನಾಥ ಎಂದಿನಂತೆ ಮಧ್ಯಾಹ್ನ ಊಟಕ್ಕೆಂದು ಅಂಗಡಿಯಿಂದ ಮನೆಗೆ ಬಂದಾಗ ಇವರೇ ಊಟ ಬಡಿಸಿದ್ದಾರೆ. ನಂತರ ತಂದೆ ಮರಳಿ ಅಂಗಡಿಗೆ ತೆರಳಿದಾಗ ಇಬ್ಬರು ಯುವತಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ತಾಯಿ ಹೊಲದಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಓದಿ: ಕಲಬುರಗಿ: ಗದ್ದುಗೆ ಮಠದ ರೇವಣಸಿದ್ಧ ಮಹಾಸ್ವಾಮೀಜಿ ವಿಧಿವಶ

ಸ್ಥಳಕ್ಕೆ ಪಿಎಸ್ಐ ರಾಜಶೇಖರ ರಾಠೋಡ ಭೇಟಿ‌ ನೀಡಿ ಪರಿಶೀಲನೆ ‌ನಡೆಸಿದ್ದಾರೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಂತರವಷ್ಟೇ ಈ ಸಹೋದರಿಯರ ಸಾವಿಗೆ ಕಾರಣ ತಿಳಿದು ಬರಬೇಕಿದೆ.

Last Updated : Dec 8, 2020, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.