ETV Bharat / state

ಸಿದ್ದರಾಮಯ್ಯ ಇರೋವರೆಗೆ ಡಿಕೆಶಿ ಸಿಎಂ ಆಗುವುದಿಲ್ಲ: ಸಿ.ಪಿ ಯೋಗೇಶ್ವರ್ - ಬಿಜೆಪಿ ಹೈಕಮಾಂಡ್

ಡಿಕೆಶಿ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದು, ಸಿದ್ದರಾಮಯ್ಯ ಇರೋವರೆಗೆ ಅದು ಯಾವುದೇ ಕಾರಣಕ್ಕೂ ಈಡೇರುವುದಿಲ್ಲ ಎಂದು ಸಚಿವ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

Siddaramaiah will not be the CM until DKC is says says cp yogeshwar

author img

By

Published : Jun 29, 2021, 10:48 AM IST

ಕಲಬುರಗಿ: ಸಿದ್ದರಾಮಯ್ಯ ಇರೋವರೆಗೆ ಡಿ.ಕೆ ಶಿವಕುಮಾರ್ ಸಿಎಂ ಆಗುವುದಿಲ್ಲ ಎಂದು ಸಚಿವ ಸಿ.ಪಿ ಯೋಗೇಶ್ವರ್ ಭವಿಷ್ಯ ನುಡಿದಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅವರು ಮಾತನಾಡಿದರು.

ಸಚಿವ ಸಿ.ಪಿ ಯೋಗೇಶ್ವರ್ ಹೇಳಿಕೆ

70 ವರ್ಷದಿಂದ ದಲಿತ ಸಮುದಾಯ ಕಾಂಗ್ರೆಸ್ ಪರವಿತ್ತು. ಆದರೆ ಅವರಿಗೆ ಅನ್ಯಾಯವಾದ ಹಿನ್ನೆಲೆಯಲ್ಲಿ ದಲಿತ ಸಿಎಂ ಆಗಬೇಕೆಂಬ ಕೂಗು ಕೇಳಿ ಬರುತ್ತಿದ್ದು, ಮುಂದೆ ಇದು ಬಲಿಷ್ಠವಾಗಲಿದೆ ಎಂದರು.

ಇನ್ನು ಬಿಜೆಪಿಯ ಕಾರ್ಯಕರ್ತನಾಗಿ ನನ್ನ ಭಾವನೆಗಳನ್ನು ಹೈಕಮಾಂಡ್ ಮುಂದೆ ಹೇಳಿಕೊಂಡಿದ್ದೇನೆ. ವಾದ-ವಿವಾದ ಎಲ್ಲವೂ ಮುಗಿದಿದೆ. ಈಗ ಜಡ್ಜ್ಮೆಂಟ್ ಬರುವ ನಿರೀಕ್ಷೆಯಲ್ಲಿದ್ದೇವೆ. ಪಕ್ಷದ ಹೈಕಮಾಂಡ್ ಏನಾದ್ರೂ ಮಾರ್ಗಸೂಚಿ ನೀಡುತ್ತದೆ ಎಂಬ ಆಶಾಭಾವನೆ ಇದೆ ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ ಮಾಧ್ಯಮದಲ್ಲಿ ನೋಡಿದ್ದೇನೆ. ಎಲ್ಲವನ್ನು ಪಕ್ಷದ ಚೌಕಟ್ಟಿನಲ್ಲಿ ಸರಿಮಾಡಿಕೊಂಡು ಹೋಗುತ್ತೇವೆ. ನಮ್ಮ ಬಳಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.