ETV Bharat / state

ಪಾದಯಾತ್ರೆ ವೇಳೆ ತಳ್ಳಿದ ಆರೋಪ: ಡಿಕೆಶಿ ವಿರುದ್ಧ ಮಾಜಿ ಶಾಸಕ ಆಕ್ರೋಶ - former MLA BR Patil outrage against DK Shivkumar

ಕಲಬುರಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಹಿರಿಯ ಮಾಜಿ ಶಾಸಕ ಬಿ.ಆರ್​. ಪಾಟೀಲ್​ ಅವರು ವಾಗ್ದಾಳಿ ನಡೆಸಿದ್ದಾರೆ.

Senior MLA BR Patil outrage against DK Shivkumar
ಡಿಕೆಶಿವಕುಮಾರ್​​ ವಿರುದ್ಧ ಹಿರಿಯ ಶಾಸಕ ಬಿಆರ್​​ ಪಾಟೀಲ್​ ಆಕ್ರೋಶ
author img

By

Published : Mar 6, 2022, 4:49 PM IST

Updated : Mar 6, 2022, 5:15 PM IST

ಕಲಬುರಗಿ: ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಆರ್​. ಪಾಟೀಲ್​ ಅವರು ಡಿ ಕೆ ಶಿವಕುಮಾರ್ ಅವರಿಗೆ ಶುಭ ಕೋರಲು ತೆರಳಿದ್ದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷರು ಅವರ ತೆಲೆ ಮೇಲಿನ ಟೋಪಿ ಬಿಸಾಕಿ ಪಕ್ಕಕ್ಕೆ ತಳ್ಳಿದ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಂತೆ ಸ್ವತಃ ಮಾಜಿ ಶಾಸಕರೇ ಪ್ರತಿಕ್ರಿಯೆ ನೀಡಿದ್ದಾರೆ.

ಪಾದಯಾತ್ರೆ ವೇಳೆ ಶಾಸಕರನ್ನು ತಳ್ಳಿದ ಡಿಕೆ ಶಿವಕುಮಾರ್​

ನನ್ನ ಜೀವನದಲ್ಲಿ ಯಾವತ್ತು ಇಂತಹ ಘಟನೆ ನಡೆದಿರಲಿಲ್ಲ. ಇಂತಹ ವರ್ತನೆಗೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಆತ್ಮ ಗೌರ ಇದ್ದವರೂ ಯಾರೂ ಇದನ್ನು ಸಹಿಸುವುದಿಲ್ಲ. ನಾನು ಇದನ್ನು ಖಂಡಿಸುತ್ತೇನೆ ಎಂದು ಡಿ ಕೆ ಶಿವಕುಮಾರ್ ವಿರುದ್ಧ ಬಿ ಆರ್​ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿವಕುಮಾರ್​​ ವಿರುದ್ಧ ಹಿರಿಯ ಶಾಸಕ ಬಿ ಆರ್​​ ಪಾಟೀಲ್​ ಆಕ್ರೋಶ

ಇನ್ನೊಂದಡೆ ಬಿ ಆರ್ ಪಾಟೀಲ್ ಅವರ ಅಭಿಮಾನಿಗಳು ಸಹ ಡಿಕೆಶಿ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿ ಆರ್ ಪಾಟೀಲ್ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಇದೇ ಕಾರಣಕ್ಕೆ ಡಿಕೆಶಿ ಹೀಗೆ ವರ್ತಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಇದನ್ನೂ ಓದಿ: ಮುರಗೋಡ ಡಿಸಿಸಿ ಬ್ಯಾಂಕ್ ಶಾಖೆಗೆ ಕನ್ನ: 4.41 ಕೋಟಿ ನಗದು, 1.5 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ

Last Updated : Mar 6, 2022, 5:15 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.