ETV Bharat / state

ಕಿಡ್ನಿ ವೈಫಲ್ಯದಿಂದ ಬಳಲಿದ ಕುಟುಂಬಕ್ಕೆ ಮುಂಬೈನ ಸಂಧ್ಯಾ ಫರ್ನಾಂಡೀಸ್ ನೆರವು!

author img

By

Published : Feb 2, 2021, 8:11 PM IST

Updated : Feb 2, 2021, 10:58 PM IST

ಮಮತಾಳ ದಯನೀಯ ಸ್ಥಿತಿ ಮತ್ತು ಕುಟುಂಬದ ಪರಿಸ್ಥಿತಿಯನ್ನು ನಮ್ಮ ಟೀಮ್​​ನ ಚನ್ನಬಸಪ್ಪ ಹೊಲಿ ಹಲಚೇರಾ ಹಾಗೂ ಲಕ್ಷ್ಮೀಕಾಂತ ಮುಕರಂಬಿ ಅವರ ಮೂಲಕ ಅರಿತಾಗ ತೀರಾ ದುಃಖವೆನಿಸಿತು. ಕೂಡಲೇ ಮಮತಾಳ ಬದುಕಿಗೆ ಆಸರೆಯಾಗಬೇಕೆಂಬ ಆಲೋಚನೆಯಿಂದ ಸಹಾಯ ಮಾಡಿದ್ದೇನೆ..

Sedam
ಕಿಡ್ನಿ ವೈಫಲ್ಯದಿಂದ ಬಳಲಿದ ಕುಟುಂಬಕ್ಕೆ ಮುಂಬೈನ ಸಂಧ್ಯಾ ಫರ್ನಾಂಡೀಸ್ ನೆರವು

ಸೇಡಂ : ಹುಟ್ಟಿನಿಂದ ಕುಬ್ಜೆ. ಅಂಗವಿಕಲೆ. ರಸ್ತೆಯ ಪಕ್ಕದಲ್ಲಿ ಬಟ್ಟೆ ಮಾರಾಟ ಮಾಡಿ ಮೂರು ಜನ ಹೆಣ್ಣುಮಕ್ಕಳನ್ನು ಸಾಕಿ, ತುತ್ತಿನ ಚೀಲ ತುಂಬಿಸಿಕೊಳ್ಳುವ ತೀರಾ ಬಡ ಕುಟುಂಬ ಅದು. ಇದ್ದ ಸವಲತ್ತಿನಲ್ಲೇ ಸುಖದ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೊದಗಿದ ಕಿಡ್ನಿ ವೈಫಲ್ಯದ ಪೆಡಂಭೂತ.

ಇದು ಸೇಡಂ ಪಟ್ಟಣದ ಪುರಾನಾ ಬಜಾರ ಬಡಾವಣೆಯಲ್ಲಿನ ಬಲರಾಮ ಬಗಾಡೆಯವರ ಕಷ್ಟದ ದಿನಗಳ ಕರಾಳ ಸತ್ಯ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಬಟ್ಟೆ ಮಾರಿ ಜೀವನ ಸಾಗಿಸುವ ಬಲರಾಮ ಮೂರು ಜನ ಹೆಣ್ಣು ಮಕ್ಕಳ ತಂದೆ. ಮೊದಲ ಮಗಳು ಮಮತಾ ಹುಟ್ಟಿನಿಂದಲೇ ಕುಬ್ಜೆ ಹಾಗೂ ಅಂಗವಿಕಲೆ.

ತೀರಾ ಬಡತನದಲ್ಲಿ ಜೀವನ ಸಾಗಿಸುವ ಬಲರಾಮರಿಗೆ ಇದೇ ಹೆಣ್ಣು ಮಗು ಆಸರೆಯೂ ಆಗಿದ್ದಳು. ತನ್ನ ವೈಫಲ್ಯಗಳನ್ನೂ ಮೀರಿ ತಂದೆಯ ಜೊತೆ ವ್ಯಾಪಾರದಲ್ಲಿ ಕೈ ಜೋಡಿಸುತ್ತಿದ್ದಳು. ರಸ್ತೆಯಲ್ಲಿ ಕೂತು ಬಟ್ಟೆ ಮಾರುತ್ತಿದ್ದಳು. ಬದುಕಿನುದ್ದಕ್ಕೂ ಮಗಳ ಭವಿಷ್ಯ ರೂಪಿಸಲು ನಾನಾ ಕಸರತ್ತು ನಡೆಸುತ್ತಿದ್ದ ಬಲರಾಮ, ಸದಾಕಾಲ ಸೋಲುತ್ತಿದ್ದರು.

ಆದರೆ, ಕೆಲ ದಿನಗಳ ಹಿಂದೆ ಮತ್ತೊಂದು ದೊಡ್ಡ ಆಘಾತ ಕುಟುಂಬಕ್ಕೆ ಬಂದೆರಗಿತ್ತು. ಅದೆ ಮಮತಾಳ ಎರಡೂ ಕಿಡ್ನಿಗಳ ಕಾರ್ಯನಿರ್ವಹಿಣೆ ಸ್ಥಗಿತವಾಗಿರುವುದು. ಕಿತ್ತು ತಿನ್ನುವ ಬಡತನದ ಮಧ್ಯೆ ಮಮತಾಳ ಕಿಡ್ನಿ ವೈಫಲ್ಯ, ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಅನಕ್ಷರಸ್ಥರಾದ ಬಲರಾಮ ಇರುವ ಅಲ್ಪ ಸ್ವಲ್ಪ ಹಣ ಸೇರಿಸಿ ಸಾಲ ಮಾಡಿ ಚಿಕಿತ್ಸೆ ಕೊಡಿಸಿ, ತೀರಾ ಬಳಲಿಹೋಗಿದ್ದರು.

ಈಗ ಪ್ರತಿನಿತ್ಯ ಡಯಾಲಿಸಿಸ್ ಮೂಲಕ ಮಗಳನ್ನು ಬದುಕಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಖರ್ಚಿನ ಭಾರಕ್ಕೆ ಬೆದರಿ ಯಾವ ದಾರಿ ಕಾಣದೆ ದೇವರ ಮೊರೆ ಹೋಗಿದ್ದರು. ಸರ್ಕಾರಕ್ಕೆ ನೆರವಿನ ಹಸ್ತ ಚಾಚಿದ್ದರು. ಅದೂ ಕೂಡ ಫಲ ನೀಡಿರಲಿಲ್ಲ. ಮುಂದಿನ ದಾರಿ ಕಾಣದೆ ಕುಳಿತ ಕುಟುಂಬಕ್ಕೆ ಕಡೆಗೂ ಆಸರೆಯಾಗಲು ಮುಂಬೈ ಮೂಲದ ಮಹಿಳೆ ಮುಂದಾಗಿದ್ದಾರೆ.

26 ವರ್ಷದ ಮಮತಾಳ ದುಸ್ಥಿತಿಯನ್ನು ಮನಗಂಡ ಎಸ್.ಒ.ಎಸ್. ಸೇವಿರ್ಸ್ ಬಳಗ ಸಂಧ್ಯಾ ಫರ್ನಾಂಡೀಸ್ ನೆರವಿನ ಹಸ್ತ ಚಾಚಿದ್ದಾರೆ. ಎಸ್.ಒ.ಎಸ್. ಸೇವಿಯರ್ಸ್‌ ಬಳಗದ ಮೂಲಕ ಸದಾಕಾಲ ಬಡವರಿಗೆ ನೆರವಾಗುವ ಸಂಧ್ಯಾ ಫರ್ನಾಂಡಿಸ್ ಅವರು ಮಮತಾಳ ಎರಡು ತಿಂಗಳ ಡಯಾಲಿಸಿಸ್ ಖರ್ಚನ್ನು (ಒಂದು ಲಕ್ಷ ಇಪ್ಪತ್ತು ಸಾವಿರ) ನೀಡಿ, ನಂತರದ ಚಿಕಿತ್ಸೆಗೂ ನೆರವಾಗುವ ಭರವಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಇಡೀ ಜೀವನವನ್ನು ಕಷ್ಟದಲ್ಲೇ ಕಳೆದ ನನಗೆ ನನ್ನ ಮಗಳನ್ನು ಬದುಕಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಆದರೆ ಮುಖ ಪರಿಚಯವೂ ಇಲ್ಲದ ಎಸ್.ಒ.ಎಸ್. ಸೇವಿರ್ಸ್ನ ಸಂಧ್ಯಾ ಫರ್ನಾಂಡೀಸ್, ಚನ್ನಬಸಪ್ಪ ಹೊಲಿ ಹಲಚೇರಿ, ಲಕ್ಷ್ಮಿಕಾಂತ ಮುಕರಂಬಿ ಅವರು ನನ್ನ ಮಗಳ ಚಿಕಿತ್ಸೆ ಸಂಪೂರ್ಣ ವೆಚ್ಚ ಭರಿಸುತ್ತಿದ್ದಾರೆ. ದೇವರ ಮೊರೆ ಹೋದ ನನಗೆ ಸಂಧ್ಯಾ ಅವರೇ ದೇವರ ರೂಪದಲ್ಲಿ ಬಂದು ನೆರವಾಗಿದ್ದಾರೆ ಎನ್ನುತ್ತಾರೆ ಯುವತಿ ತಂದೆ ಬಲರಾಮ.

ಮಮತಾಳ ದಯನೀಯ ಸ್ಥಿತಿ ಮತ್ತು ಕುಟುಂಬದ ಪರಿಸ್ಥಿತಿಯನ್ನು ನಮ್ಮ ಟೀಮ್​​ನ ಚನ್ನಬಸಪ್ಪ ಹೊಲಿ ಹಲಚೇರಾ ಹಾಗೂ ಲಕ್ಷ್ಮೀಕಾಂತ ಮುಕರಂಬಿ ಅವರ ಮೂಲಕ ಅರಿತಾಗ ತೀರಾ ದುಃಖವೆನಿಸಿತು. ಕೂಡಲೇ ಮಮತಾಳ ಬದುಕಿಗೆ ಆಸರೆಯಾಗಬೇಕೆಂಬ ಆಲೋಚನೆಯಿಂದ ಸಹಾಯ ಮಾಡಿದ್ದೇನೆ.

ಮಮತಾ ಮೊದಲಿನಂತೆ ನಗು, ನಗುತಾ ಬಾಳಿದರೆ ಅದೇ ನಮಗೆ ಕಾಣಿಕೆ. ಸಹಾಯ ಮಾಡಿದ್ದಕ್ಕೆ ನನಗೆ ಹೆಮ್ಮೆ ಇದೆ ಎನ್ನುತ್ತಾರೆ ಮುಂಬೈನ ಎಸ್‌ಒಎಸ್ ಸೇವಿಯರ್ಸ್ ಬಳಗದ ಸಂಧ್ಯಾ ಫರ್ನಾಂಡೀಸ್. ಗೊತ್ತು, ಗುರಿಯಿಲ್ಲದೆಯೇ ಮಗುವಿನ ಜೀವನಕ್ಕೆ ಸಹಾಯ ಮಾಡುವ ಮನಸ್ಸುಗಳು ಇಂದಿನ ದಿನಗಳಲ್ಲೂ ಇರುವುದು ಬಲು ಅಪರೂಪ.

ಸಂಧ್ಯಾ ಫರ್ನಾಂಡೀಸ್ ಅವರಂತಹ ಮಾನವೀಯ ಗುಣವುಳ್ಳವರ ಅವಶ್ಯಕತೆ ಭಾರತಕ್ಕಿದೆ. ಬರುವ ದಿನಗಳಲ್ಲಿ ಶ್ರೀಮಠದ ವತಿಯಿಂದ ಅವರನ್ನು ಅಭಿನಂದಿಸುವ ಕೆಲಸ ಮಾಡಲಾಗುವುದು ಎಂದು ಹಾಲಪ್ಪಯ್ಯ ವಿರಕ್ತ ಮಠದ ಪೂಜ್ಯ ಪಂಚಾಕ್ಷರಿ ಮಹಾಸ್ವಾಮಿಗಳು ತಿಳಿಸಿದರು.

Last Updated : Feb 2, 2021, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.