ಕಲಬುರಗಿ: ರಾಜ್ಯದಲ್ಲಿ ರೌಡಿ ರಾಜಕಾರಣದ ವಿವಾದ ತಣ್ಣಗಾಗುವ ಮುನ್ನವೇ ಕಲಬುರಗಿ ಮಹಾನಗರ ಪಾಲಿಕೆಗೆ ರೌಡಿಶೀಟರ್ಗಳನ್ನು ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಿರುವ ವಿಚಾರ ಮತ್ತೊಂದು ವಿವಾದಕ್ಕೆ ನಾಂದಿಯಾಗಿದೆ.
ರೌಡಿ ಲೋಕದಲ್ಲಿ ಸೇವನ್ ಸ್ಟಾರ್ ಎಂದು ಕುಖ್ಯಾತಿ ಪಡೆದಿರುವ ಕಲಬುರಗಿಯ ಬೋರಾಬಾಯಿ ನಗರದ ನಿವಾಸಿ ಪ್ರದೀಪ್ ಕುಮಾರ್ ಅವರನ್ನು ಮಹಾನಗರ ಪಾಲಿಕೆಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಕಲಬುರಗಿ ಆಮ್ ಆದ್ಮಿ ಪಕ್ಷದ ಮುಖಂಡರು ಆರೋಪಿಸಿದ್ದಾರೆ.
ಬಿಜೆಪಿಯಲ್ಲಿ ಯಾವುದೇ ರೌಡಿಗಳಿಗೆ ಅವಕಾಶ ನೀಡುವುದಿಲ್ಲ. ಅಂಥ ಸ್ವತಃ ಸಿಎಂ ಬೊಮ್ಮಾಯಿ ಹೇಳ್ತಾರೆ. ಇನ್ನೊಂದು ಕಡೆ ಅವರು ರೌಡಿಗಳ ಕೈಗೆ ಅಧಿಕಾರ ಕೊಡುತ್ತಿದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ರೌಡಿಗಳನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾ ಬಿಜೆಪಿಗೆ ಹಿರಿಯ ನಾಯಕರು ಸೂಚಿಸಿದಂತೆ ಕಂಡುಬರುತ್ತಿದೆ. ರೌಡಿಗಳ ಜತೆ ಸೇರಿ ಕರ್ನಾಟಕವನ್ನು ರೌಡಿರಾಜ್ಯ ಮಾಡಲು ಬಿಜೆಪಿ ನಾಯಕರು ಹೊರಟಿದ್ದಾರೆ ಎಂದು ಶರಣ ಐಟಿ ಕಿಡಿಕಾರಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಗೆ ರೌಡಿಶೀಟರ್ಗಳನ್ನು ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಿರುವ ಆದೇಶ ಹಿಂಪಡೆಯಬೇಕು, ಇಲ್ಲದಿದ್ರೆ ಹೋರಾಟದ ಹಾದಿ ತುಳಿಯಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದನ್ನೂಓದಿ:ಹುಬ್ಬಳ್ಳಿ: ರೈಲ್ವೆ ಸಫಾಯಿ ಕರ್ಮಚಾರಿಗಳಿಂದ ರಕ್ತ ಪತ್ರ ಚಳವಳಿ