ಕಲಬುರಗಿ : ನಾನು ರೌಡಿಸಂ ಬಿಟ್ಟಿದ್ದೇನೆ, ಹೆಂಡತಿ ಮಕ್ಕಳೊಂದಿಗೆ ಹೈದರಾಬಾದ್ಗೆೆ ಶಿಫ್ಟ್ ಆಗಿದ್ದೇನೆ. ನನ್ನ ಹೆಸರು ಹೇಳಿಕೊಂಡು ಯಾರಾದ್ರೂ ಹೆದರಿಸಿದರೆ ಪೊಲೀಸ್ ಠಾಣೆಗೆ ದೂರುಕೊಡಿ ಎಂದು ಕುಖ್ಯಾತ ರೌಡಿ ಸತೀಶ ಮನವಿ ಮಾಡಿದ್ದಾನೆ.
ತಿಳಿಯದೆ ರೌಡಿಯಾಗಿ ಮಾಡಬಾರದನ್ನು ಮಾಡಿದ್ದೇನೆ. ನಾನು ಮಾಡಿರುವ ತಪ್ಪಿನ ಬಗ್ಗೆ ನನಗೆ ಈಗ ಅರಿವಾಗಿದೆ. ಹೆಂಡತಿ ಮಕ್ಕಳೊಂದಿಗೆ ಹೈದರಾಬಾದ್ಗೆ ಶಿಫ್ಟ್ ಆಗುತ್ತಿದ್ದೇನೆ. ಆದ್ರೆ ಕೆಲವರು ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ಹಪ್ತಾ ವಸೂಲಿ ಸೇರಿದಂತೆ ಹಲವು ದೌರ್ಜನ್ಯವೆಸಗುವ ಕೆಲಸ ಮಾಡುತ್ತಿದ್ದಾರೆ. ಯಾರೇ ನನ್ನ ಹೆಸರು ಬಳಸಿಕೊಂಡು ದೌರ್ಜನ್ಯ ಗುಂಡಾಗಿರಿ ಮಾಡಿದರೆ ನೇರವಾಗಿ ಪೊಲೀಸ್ ಠಾಣೆಗೆ ದೂರು ದಾಖಲಿಸಿ ಎಂದಿದ್ದಾನೆ.
ಕಲಬುರಗಿ ಜಿಲ್ಲೆಯಲ್ಲದೇ ಅಂತರಾಜ್ಯಗಳಲ್ಲಿಯೂ ತನ್ನ ಖದರ್ ತೋರಿಸಿ, ರೌಡಿಗಳ ಬಾಸ್ ಆಗಿ ಮೆರೆದಿದ್ದ ಕುಖ್ಯಾತ ರೌಡಿ ಸತೀಶ್ ಹೇಳಿಕೆ ಕೊಟ್ಟಿರುವ 57 ಸೆಕೆಂಡ್ ವಿಡಿಯೋ ಇದೀಗ ವೈರಲ್ ಆಗಿದೆ.