ಕಲಬುರಗಿ: ನಿನ್ನೆ ಕೊರೊನಾಕ್ಕೆ ಮತ್ತೊಂದು ಬಲಿಯಾದ ಹಿನ್ನಲೆ ಜಿಲ್ಲೆಯ ಜನರು ಸ್ವಯಂ ರಕ್ಷಣೆಗೆ ಮುಂದಾಗುತ್ತಿದ್ದಾರೆ. ನಗರದ ಗಂಗಾನಗರದಲ್ಲಿ ರಸ್ತೆ ಬ್ಲಾಕ್ ಮಾಡಿರುವ ಜನ ತಮ್ಮ ಬಡಾವಣೆಗಳಿಗೆ ಬೇರೆ ಕಡೆಯಿಂದ ಜನರು ಬರದಂತೆ ನಿರ್ಬಂಧ ಹೇರಿದ್ದಾರೆ.
ತಳ್ಳುವಗಾಡಿಯ ತರಕಾರಿ ಮಾರಾಟಗಾರರು ಪಾಲಿಕೆ ನಿಯಮ ಅನುಸರಿಸುತ್ತಿಲ್ಲ ಎಂದು ಆರೋಪಿಸಿ ತರಕಾರಿಯವರಿಗೆ ಬಡಾವಣೆಗಳಲ್ಲಿ ನಿರ್ಬಂಧ ಹಾಕಿದ್ದಾರೆ.
ನಿನ್ನೆಯಷ್ಟೆ ಕೊರೊನಾದಿಂದ ಮತ್ತೊರ್ವ ಮೃತಪಟ್ಟಿದ್ದು, ಇದುವರೆಗೆ ಒಟ್ಟು 9 ಜನ ಕೊರೊನಾ ಸೋಂಕಿತರಾಗಿದ್ದು, ಇವರಲ್ಲಿ ಇಬ್ಬರು ಸಾವನ್ನಪ್ಪಿದಂತಾಗಿದೆ. ದಿನದಿಂದ ದಿನಕ್ಕೆ ವೈರಸ್ ಉಲ್ಬಣವಾಗುತ್ತಿರುವ ಕಾರಣ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ.