ETV Bharat / state

ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್​ ಬಳಸಿ ಅಕ್ರಮ: ಆರ್​ ಡಿ ಪಾಟೀಲ್​ ಪ್ರಮುಖ ಆರೋಪಿ.. ಎಸ್​​​​ಪಿ

ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್​ ಬಳಸಿ ಅಕ್ರಮ ಎಸಗಿದ ಪ್ರಕರಣದಲ್ಲಿ ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣ ಆರೋಪಿ ಆರ್​ ಡಿ ಪಾಟೀಲ್ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ.

rd-patil-is-the-main-accused-in-kes-exam-scam
ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್​ ಬಳಸಿ ಅಕ್ರಮ : ಆರ್​ ಡಿ ಪಾಟೀಲ್​ ಪ್ರಮುಖ ಆರೋಪಿ.. ಎಸ್ಪಿ
author img

By ETV Bharat Karnataka Team

Published : Oct 30, 2023, 9:49 AM IST

Updated : Oct 30, 2023, 10:16 PM IST

ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್​ ಬಳಸಿ ಅಕ್ರಮ: ಆರ್​ ಡಿ ಪಾಟೀಲ್​ ಪ್ರಮುಖ ಆರೋಪಿ.. ಎಸ್ಪಿ

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆಯಂತೆ ಕೆಇಎ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಕೆಇಎ ನೇಮಕಾತಿ ಪರೀಕ್ಷೆಯಲ್ಲಿಯೂ ಪ್ರಮುಖ ಆರೋಪಿ ಆಗಿದ್ದಾರೆ.

2021ರಲ್ಲಿ 545 ಪಿಎಸ್ಐ ಹುದ್ದೆಗಳಿಗೆ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಈ ಸಂಬಂಧ ಆರ್​ ಡಿ ಪಾಟೀಲ್ ಸೇರಿ ಹಲವರನ್ನು​ ಬಂಧಿಸಲಾಗಿತ್ತು. ಇದೀಗ ಪಿಎಸ್ಐ ನೇಮಕಾತಿ ಅಕ್ರಮದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಈ ಬಗ್ಗೆ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುವಾಗ ಸಿಕ್ಕಿ ಬಿದ್ದ ಅಭ್ಯರ್ಥಿಗಳೆಲ್ಲ ಆರ್ ಡಿ ಪಾಟೀಲ್ ಹೆಸರು ಬಾಯಿ ಬಿಟ್ಟಿದ್ದಾರೆ.

ಬಬ್ಬೊಬ್ಬರಿಗೊಂದು ರೇಟ್ ಫಿಕ್ಸ್ : ಅಕ್ರಮ ಎಸಗಲು ಆರೋಪಿಗಳ ಗ್ಯಾಂಗ್​ ಪ್ರತಿ ಅಭ್ಯರ್ಥಿಗಳ ಬಳಿ ಒಂದು ಮೊತ್ತಕ್ಕೆ ಡೀಲ್​ ಮಾಡಿ, ಬಳಿಕ ಅದರ ಅರ್ಧದಷ್ಟು ಹಣವನ್ನು ಮುಂಗಡವಾಗಿ ಪಡೆದುಕೊಂಡು ಬ್ಲೂಟೂತ್ ನೀಡಿತ್ತು. ಇದರಂತೆ ಬೀದರ್ ಜಿಲ್ಲೆಯ ಮಂಠಾಳ ಗ್ರಾಮದ ಆಕಾಶ್ ಎಂಬಾತನಿಗೆ 25 ಲಕ್ಷಕ್ಕೆ ಡೀಲ್ ಮಾಡಿ 8 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದು ಬ್ಲೂಟೂತ್ ನೀಡಲಾಗಿತ್ತು. ಜೊತೆಗೆ ಕಲಬುರಗಿ ಜಿಲ್ಲೆಯ ಸಂತೊಷ್, ಬಾಬು, ಲಕ್ಷ್ಮಿಪುತ್ರ ಎಂಬವರ ಜೊತೆ ತಲಾ 20 ಲಕ್ಷಕ್ಕೆ ಡೀಲ್ ಮಾಡಿ, 5 ಲಕ್ಷ ರೂಪಾಯಿ ಮುಂಗಡವಾಗಿ ಪಡೆದು ಬ್ಲೂಟೂತ್ ಕೊಟ್ಟಿದ್ದರು. ಈ ಬ್ಲೂಟೂತ್​ನೊಂದಿಗೆ ಪರೀಕ್ಷೆ ಬರೆಯಲು ಮುಂದಾಗಿದ್ದ ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಣ್ಣನಿಗೆ ಸಹಾಯ‌ ಮಾಡಲು ಹೋಗಿ ಜೈಲು ಪಾಲು : ಸಹೋದರನಿಗೆ ಸರ್ಕಾರಿ ನೌಕರಿ ಸಿಗುತ್ತದೆ ಎಂದು ಕಾರಿನಲ್ಲಿ ಕುಳಿತು ಸಹೋದರನಿಗೆ ಉತ್ತರವನ್ನು ಹೇಳುತ್ತಿದ್ದವಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ಚಿಕ್ಕಬಳ್ಳಾಪುರದ ಸರಕಾರಿ ಸ್ಟಾಪ್ ನರ್ಸಿಂಗ್ ನೌಕರಳಾದ ಸೊನ್ನ ಗ್ರಾಮದ ಶೈಲಶ್ರೀ ಎಂದು ಗುರುತಿಸಲಾಗಿದೆ. ಇದೇ ಸಂದರ್ಭ ಅಣ್ಣನ ಪರೀಕ್ಷೆ ಇತ್ತು. ಪರೀಕ್ಷೆಯಲ್ಲಿ ಸಹಾಯ ಮಾಡಲು ಎಂದು ಕಾರಿನಲ್ಲಿ ಕುಳಿತು ಉತ್ತರ ಹೇಳುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಬ್ಲೂಟೂತ್ ಡಿವೈಸ್ ಸಹಾಯದಿಂದ ಪರೀಕ್ಷೆ ಬರೆಯಲು ಯತ್ನಿಸಿ ಸಿಕ್ಕಿಬಿದ್ದಿರುವ ಆಕಾಶ ಮಂಠಾಳೆ ಬಿಇ ಓದಿ ಬೆಂಗಳೂರಿನಲ್ಲಿ 80 ಸಾವಿರ ಸಂಬಳ ಪಡೆಯುತ್ತಿದ್ದನಂತೆ. ಆದರೆ ಸರ್ಕಾರಿ ನೌಕರಿ ಪಡಯಲು ಅಕ್ರಮ ನಡೆಸಿದ್ದಾನೆ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಸರ್ಕಾರ ನಿರ್ಲಕ್ಷ್ಯ ಆರೋಪ : ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗುವುದರ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಸಂಘದ ಮುಖಂಡ ರವಿಶಂಕರ್ ಪಾಟೀಲ್ ಕಳೆದ 15 ದಿನಗಳ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಅಕ್ರಮದ ಕಿಂಗ್ ಪಿನ್ ಆರ್ ಡಿ ಪಾಟೀಲ್​ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪರೀಕ್ಷೆ ಅಕ್ರಮದ ತನಿಖೆಗಾಗಿ ಡಿವೈಎಸ್ ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.

ಫುಲ್​ ಶರ್ಟ್​ ಕತ್ತರಿಸಿ ಪರೀಕ್ಷೆ ಬರೆದ ಅಭ್ಯರ್ಥಿ : ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳಿಗೆ ಫುಲ್ ಶರ್ಟ್ ಧರಿಸಲು ಅನುಮತಿ ಇಲ್ಲ ಎಂದು ಅಧಿಕಾರಿಗಳು ಕಡ್ಡಾಯ ಮಾಡಿದ್ದರು. ಇದರಿಂದ ರಾಯಚೂರಿನಿಂದ ಬಂದಿದ್ದ ಅಭ್ಯರ್ಥಿಯೊಬ್ಬ ತನ್ನ ಫುಲ್ ಶರ್ಟ್ ಕತ್ತರಿಸಿ, ಆಫ್ ಶರ್ಟ್ ಮಾಡಿ ಪರೀಕ್ಷೆ ಬರೆದಿದ್ದಾನೆ.

ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ: ನೇಮಕಾತಿ ಪರೀಕ್ಷೆಗಳಲ್ಲಿಯೂ ಸಹ ಕಾಂಗ್ರೆಸ್ ಸರ್ಕಾರ ಕಲೆಕ್ಷನ್‌ಗೆ ಇಳಿದಿದೆ. ಕೆ.ಇ.ಎ. ಪರೀಕ್ಷಾ ಅಕ್ರಮದಲ್ಲಿ ನಿಮ್ಮ ಸಂಪುಟದ ಸಚಿವರುಗಳೇ ಭಾಗಿಯಾಗಿರುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಆಗ್ರಹಿಸಿದೆ.

  • ರಾಜ್ಯದ #ATMSarkara ನೇಮಕಾತಿ ಪರೀಕ್ಷೆಗಳಲ್ಲಿಯೂ ಸಹ ಕಲೆಕ್ಷನ್‌ಗೆ ಇಳಿದಿದೆ.

    ಕಾಂಗ್ರೆಸ್ ಮುಖಂಡ ಆರ್. ಡಿ. ಪಾಟೀಲ್ ಬೆಂಬಲಿಗರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಗಮನಿಸಿದರೆ, @INCKarnataka ಸರ್ಕಾರವೇ ಪರೀಕ್ಷಾ ಅಕ್ರಮಕ್ಕೆ ಕುಮ್ಮಕ್ಕು ನೀಡಿದೆ ಎಂಬುದು ಸಾಬೀತಾಗುತ್ತದೆ.

    ಉನ್ನತ ಶಿಕ್ಷಣ ಸಚಿವ @drmcsudhakar ಅವರೇ, ಈ… pic.twitter.com/NHtxzxKb1R

    — BJP Karnataka (@BJP4Karnataka) October 29, 2023 " class="align-text-top noRightClick twitterSection" data=" ">

ರಾಜ್ಯದ ಎಟಿಎಂ ಸರ್ಕಾರ ನೇಮಕಾತಿ ಪರೀಕ್ಷೆಗಳಲ್ಲಿಯೂ ಸಹ ಕಲೆಕ್ಷನ್‌ಗೆ ಇಳಿದಿದೆ. ಕಾಂಗ್ರೆಸ್ ಮುಖಂಡ ಆರ್.ಡಿ ಪಾಟೀಲ್ ಬೆಂಬಲಿಗರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಗಮನಿಸಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರವೇ ಪರೀಕ್ಷಾ ಅಕ್ರಮಕ್ಕೆ ಕುಮ್ಮಕ್ಕು ನೀಡಿದೆ ಎಂಬುದು ಸಾಬೀತಾಗುತ್ತದೆ. ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರೇ, ಈ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರೋ ಅಥವಾ ಇವರಿಗೂ ಅಮಾಯಕರು/ಮುಗ್ದರು ಎಂಬ ಪಟ್ಟ ಕಟ್ಟುತ್ತಿರೋ..? ಪ್ರತಿ ಅಭ್ಯರ್ಥಿಗಳಿಂದ ವಸೂಲಿ ಮಾಡಿರುವ ₹5-8 ಲಕ್ಷದಲ್ಲಿ ಹೈಕಮಾಂಡ್ ಪಾಲೆಷ್ಟು ಎಂಬುದನ್ನು ರಾಜ್ಯ ಕಾಂಗ್ರೆಸ್ ಪಕ್ಷವೇ ಹೇಳಬೇಕು! ಎಂದು ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಆಗ್ರಹಿಸಿದೆ.

rd-patil-is-the-main-accused-in-kes-exam-scam
ಬಿಜೆಪಿ ಟ್ವೀಟ್​

ಕೆಇಎ ನಡೆಸಿರುವ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತದೆ ಎಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಸಂಘದವರು ತಿಂಗಳು ಮುಂಚಿತವಾಗಿ ತಿಳಿಸಿದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಸುಮ್ಮನಿದ್ದದ್ದು ಏಕೆ..??. ಸಂಬಂಧಿಸದ ವಿಷಯದಲ್ಲಿ ನಂದೆಲ್ಲಿಡ್ಲಿ ಎಂದು ಮೂಗು ತೂರಿಸುವ ಟ್ರೋಲ್ ಸಚಿವ ಪ್ರಿಯಾಂಕ್ ಖರ್ಗೆಯವರೇ, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಸಂಘದವರು ನಿಮಗೆ ಮನವಿ ಪತ್ರ ನೀಡಿದರೂ, ನೀವು ಅದನ್ನು ಸರ್ಕಾರದ ಗಮನಕ್ಕೆ ತರದೇ ಕಸದ ಬುಟ್ಟಿಗೆ ಎಸೆದಿರುವ ಹಿಂದಿನ ಮರ್ಮವೇನು?ಎಂದು ಬಿಜೆಪಿ ಪ್ರಶ್ನಿಸಿದೆ.

ಸಿಎಂ ಸಿದ್ದರಾಮಯ್ಯ ಅವರೇ, ಕೆ.ಇ.ಎ. ಪರೀಕ್ಷಾ ಅಕ್ರಮದಲ್ಲಿ ನಿಮ್ಮ ಸಂಪುಟದ ಸಚಿವರುಗಳೇ ಭಾಗಿಯಾಗಿರುವ ಸಾಧ್ಯತೆ ದಟ್ಟವಾಗಿದೆ. ನಿಮಗೆ ನಿಜಕ್ಕೂ ಪರಿಕ್ಷಾರ್ಥಿಗಳ ಪರ ಕಾಳಜಿ ಇದ್ದರೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಎಂದು ಬಿಜೆಪಿ ಒತ್ತಾಯಿಸಿದೆ.

ಇದನ್ನೂ ಓದಿ : ಬೆಳ್ಳಂ ಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ.. ದಾಖಲೆಗಳ ಪರಿಶೀಲನೆ

Last Updated : Oct 30, 2023, 10:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.