ಕಲಬುರಗಿ : ನಗರದ ಹೊರವಲಯದ ಕೆಸರಟಗಿ ಬಳಿ ಸುಮಾರು 11 ಅಡಿ ಉದ್ದದ ಬೃಹತ್ ಹೆಬ್ಬಾವೊಂದನ್ನು ರಕ್ಷಣೆ ಮಾಡಲಾಗಿದೆ. ಕಬ್ಬಿನ ಗದ್ದೆಯಲ್ಲಿದ್ದ ಹೆಬ್ಬಾವನ್ನು ಉರಗ ತಜ್ಞ ಅಮರ್ ಬಡಿಗೇರ್ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ದೈತ್ಯ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಉರಗ ತಜ್ಞ ಅಮರ್ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
ಸಾಮಾನ್ಯವಾಗಿ ಈ ತರಹದ ಹಾವು ಚಿಕ್ಕ ಪ್ರಾಣಿಗಳನ್ನು ನುಂಗುತ್ತವೆ. ಇವುಗಳು ಮನುಷ್ಯನ ದೇಹಕ್ಕೆ ಸುತ್ತಿಕೊಂಡು ಪ್ರಾಣಾಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ. ಆದುದರಿಂದ ಹಾವುಗಳು ಬಂದಾಗ ಎಚ್ಚರ ವಹಿಸಬೇಕು. ಅಲ್ಲದೇ ಹಾವುಗಳನ್ನು ಹೊಡೆದು ಸಾಯಿಸುವ ಬದಲು ಉರಗ ರಕ್ಷಕರಿಗೆ ಕರೆ ಮಾಡಿದರೆ, ಹಾವುಗಳ ರಕ್ಷಣೆ ಕಾರ್ಯ ಮಾಡಬಹುದು ಎಂದು ಅಮರ್ ಹೇಳುತ್ತಾರೆ.
ಮೂಲತಃ ಕೆಸರಟಗಿ ನಿವಾಸಿಯಾಗಿರುವ ಅಮರ್, ಕಳೆದ ನಾಲ್ಕು ವರ್ಷಗಳಿಂದ ಹಾವಿನ ರಕ್ಷಣೆಯಲ್ಲಿ ತೊಡಗಿದ್ದಾರೆ. ಇಲ್ಲಿವರೆಗೆ ಸುಮಾರು 3 ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಣೆ ಮಾಡಿದ್ದು, ಜಿಲ್ಲೆಯಲ್ಲಿ ಹಾವು ಕಂಡು ಬಂದಲ್ಲಿ ಅಮರ್ ಅವರನ್ನು ಸಂಪರ್ಕಿಸಬಹುದಾಗಿದೆ.
ಅಮರ್ ಬಡಿಗೇರ್ ಮೊಬೈಲ್ ಸಂಖ್ಯೆ- 63646 67897
ಇದನ್ನೂ ಓದಿ : ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬಂದ ರೈತ ಸ್ನೇಹಿ ಉರಗ...