ಕಲಬುರಗಿ: ಹಣ ಕೊಟ್ಟು ಅಕ್ರಮದ ಮೂಲಕ ಪಿಎಸ್ಐ ಪರೀಕ್ಷೆ ಬರೆದು ಪಾಸಾಗಿರುವ ಆರೋಪದ ಮೇಲೆ ಜೈಲು ಸೇರಿರುವ ಇಬ್ಬರು ಅಭ್ಯರ್ಥಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿದೆ. ಈ ಮೂಲಕ ಇಬ್ಬರಿಗೂ ಜೈಲೇ ಗತಿ ಎನ್ನುವಂತಾಗಿದೆ.
ಬಂಧಿತ ಅಭ್ಯರ್ಥಿಗಳಾದ ಚೇತನ್ ನಂದಗಾಂವ್ ಮತ್ತು ಅರುಣ ಕುಮಾರ್ ಎಂಬುವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಕಲಬುರಗಿ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಶುಕ್ಲಾಕ್ಷ ಪಾಲನ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ನಗರದ ಜ್ಞಾನಜ್ಯೋತಿ ಶಿಕ್ಷಣ ಸಂಸ್ದೆಯಲ್ಲಿ ನಡೆದ ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಆರೋಪಿಗಳ ವಿಚಾರಣೆ ನಡೆಸುತ್ತಿರುವ ಸಿಐಡಿ ತಂಡ ಒಬ್ಬೊಬ್ಬರನ್ನೇ ಕಂಬಿ ಹಿಂದೆ ತಳ್ಳುತ್ತಿದೆ. ಇತ್ತ ಆರೋಪಿಗಳೂ ಜಾಮೀನಿನ ಮೊರೆ ಹೋಗುತ್ತಿದ್ದು, ನಿನ್ನೆಯೂ ಕೂಡ 13 ಮಂದಿಯ ಅರ್ಜಿಗಳು ವಜಾಗೊಂಡಿದ್ದವು. ಇಂದು ಮತ್ತೆ ಇಬ್ಬರು ಅಭ್ಯರ್ಥಿಗಳ ಅರ್ಜಿ ತಿರಸ್ಕೃತಗೊಂಡಿದ್ದು, ನ್ಯಾಯಾಲಯವು ಇದುವರೆಗೆ ಪ್ರಕರಣದಲ್ಲಿ ಯಾವೊಬ್ಬ ಆರೋಪಿಗೂ ಜಾಮೀನು ನೀಡಿಲ್ಲ.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ವಿಳಾಸ ಹೇಳಿದ ವ್ಯಕ್ತಿಯೇ ಕಿಡ್ನಾಪ್, ರುದ್ರಗೌಡ ಆಪ್ತನ ವಿಚಾರಣೆ