ETV Bharat / state

ಪಿಎಸ್ಐ ಪರೀಕ್ಷೆ ಅಕ್ರಮ: ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಜೈಲಿಗೆ ಸ್ಥಳಾಂತರ - ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಜೈಲಿಗೆ ಸ್ಥಳಾಂತರ

ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್‌ ಸಿಐಡಿ ಕಸ್ಟಡಿ ಕಾಲಾವಕಾಶ ಅಂತ್ಯವಾಗಿದ್ದು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ಆರ್.ಡಿ.ಪಾಟೀಲ್
ಆರ್.ಡಿ.ಪಾಟೀಲ್
author img

By

Published : May 8, 2022, 1:07 PM IST

ಕಲಬುರಗಿ: ಸಿಐಡಿ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್‌ನನ್ನು ಕೇಂದ್ರ ಕಾರಾಗೃಹ ಸುಪರ್ದಿಗೆ ಒಪ್ಪಿಸಲಾಗಿದೆ. ಜೈಲಿಗೆ ಹೋಗುವ ಮುನ್ನ ಆರೋಪಿ ಆರ್​ಡಿಪಿ, ಮಾಧ್ಯಮಕ್ಕೆ ಕೈ‌ಮುಗಿದು 'ನಾನು ಒಳ್ಳೆಯದನ್ನೂ ಮಾಡಿದ್ದೇನೆ, ಅದನ್ನೂ ಒಂದಿಷ್ಟು ತೋರಿಸಿ' ಅಂತಾ ಹೇಳಿ ಖುಷಿ ಖುಷಿಯಿಂದ ಜೈಲಿಗೆ ಹೋದನು.

ಚೌಕ್ ಠಾಣೆಯಲ್ಲಿ ದಾಖಲಾದ ಎಫ್.ಐ.ಆರ್​ಗೆ ಸಂಬಂಧಿಸಿದಂತೆ ಆರ್.ಡಿ.ಪಾಟೀಲ್‌ನನ್ನು ಸಿಐಡಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ. ಸಿಐಡಿ ಕಸ್ಟಡಿ ಕಾಲಾವಕಾಶ ಮುಗಿದಿದ್ದು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಸಂಬಂಧ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಂ.ಎಸ್.ಇರಾನಿ ಕಾಲೇಜ್​ನಲ್ಲಿ ನಡೆದ ಅಕ್ರಮ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐ ಆರ್ ದಾಖಲಾಗಿದೆ. ಆರ್. ಡಿ.ಪಾಟೀಲ್, ಚಂದ್ರಕಾಂತ್ ಕುಲಕರ್ಣಿ, ಪ್ರಭು, ಶರಣಪ್ಪ ವಿರುದ್ದ ಎಫ್‌ಐಆರ್ ದಾಖಲಾಗಿದೆ.

ಜೈಲಿಗೆ ಕರೆದೊಯ್ಯುುವಾಗ ಆರ್.ಡಿ.ಪಾಟೀಲ್‌ ಮತ್ತೆ ಕುಚೇಷ್ಟೆ ಮಾಡಿದ್ದಾನೆ. ಈ ಹಿಂದೆ 'ಕೊಡಿ ಕೊಡಿ ಫ್ರೀ ಪ್ರಚಾರ ಕೊಡಿ ಅಂತಾ ಮಾಧ್ಯಮದ ಕ್ಯಾಮರಾಗಳತ್ತ ಬೊಟ್ಟು ಮಾಡಿ ಕಿಚಾಯಿಸಿ ದರ್ಪ ಮೆರೆದಿದ್ದ', ಬಳಿಕ ಕೆಲದಿನಗಳ ನಂತರ ದರ್ಪ ಇಳಿದು 'ಸಾಕು ನನ್ನನ್ನು ಬಿಡ್ರಣ್ಣಾ ಅಂತಾ ಕೋರಿಕೊಂಡಿದ್ದ'. ಇದೀಗ ಜೈಲಿಗೆ ಕರೆದೊಯ್ಯುವಾಗ 'ನಾನು ಒಳ್ಳೆಯದನ್ನೂ ಮಾಡಿದ್ದೇನೆ, ಅದನ್ನೂ ಒಂದಿಷ್ಟು ತೋರಿಸಿ' ಎಂದು ಮಾಧ್ಯಮದ ಕ್ಯಾಮರಾಗಳಿಗೆ ಕೈ ಮುಗಿದು ಕೇಳಿಕೊಂಡು ಗಮನ ಸೆಳೆದಿದ್ದಾನೆ.

ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ.. ಬ್ಲೂಟೂತ್ ಕಿಂಗ್‌ಪಿನ್ ಆರ್.ಡಿ‌. ಪಾಟೀಲ್‌ ಬ್ಯಾಂಕ್​ ಅಕೌಂಟ್‌ಗಳು ಫ್ರೀಜ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.