ಕಲಬುರಗಿ: ಕೊರೊನಾ ಸಬೂಬು ಹೇಳಿ ಕೆಲಸ ನೀಡದೇ, ಸಂಬಳ ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಚಿತ್ತಾಪುರ ತಾಲೂಕಿನ ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಂಪನಿ ಆಡಳಿತ ಮಂಡಳಿಯ ವರ್ತನೆಗೆ ಬೇಸತ್ತು ಎಸಿಸಿ ಪವರ್ ಪ್ಲಾಂಟ್ ಗುತ್ತಿಗೆ ನೌಕರರು ದಿಢೀರ್ ಕಂಪನಿ ಮುಂದೆ ಪ್ರತಿಭಟನೆಗೆ ಇಳಿದಿದ್ದಾರೆ. ನಿಗದಿತ ಟಾರ್ಗೆಟ್ನಂತೆ ಸಿಮೆಂಟ್ ರೆಡಿಯಾಗ್ತಿದೆ, ಮಾರಾಟವೂ ಆಗಿ ಲಾಭ ಕೂಡ ಆಗುತ್ತಿದೆ. ಆದರೆ, ಗುತ್ತಿಗೆ ಕಾರ್ಮಿಕರಿಗೆ ಮಾತ್ರ ಕೆಲಸ ಸರಿಯಾಗಿ ಕೊಡದೇ ವೇತನದಿಂದ ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಓದಿ:'ಮೋದಿ ನಿ ಸೇಲಾದೆ, ಅದಾನಿ-ಅಂಬಾನಿ ಪಾಲಾದೆ'..
ಕಂಪನಿ ಆಡಳಿತ ಮಂಡಳಿ ಅವರನ್ನು ಕೇಳಿದರೆ ಕೊರೊನಾದಿಂದ ಆರ್ಥಿಕವಾಗಿ ಮುಗ್ಗಟ್ಟಾಗಿದೆ. ಕೆಲಸ ನೀಡಲು ಆಗ್ತಿಲ್ಲ ಎಂದು ಕುಂಟು ನೆಪವೊಡ್ಡುತ್ತಿದ್ದಾರೆ. ನಮಗೆ ಸರಿಯಾಗಿ ಕೆಲಸ ಕೊಡದೇ, ವೇತನ ಸಿಗದೆ ಬೀದಿಗೆ ಬೀಳುತ್ತಿದ್ದೇವೆಂದು ಕಂಪನಿ ಆಡಳಿತದ ವಿರುದ್ಧ ಮಹಿಳಾ ಕಾರ್ಮಿಕರು ಕಿಡಿಕಾರಿದ್ರು.