ETV Bharat / state

ಕಲಬುರಗಿಯಲ್ಲಿ ಹಾಡಹಗಲೇ ನ್ಯಾಯವಾದಿಯ ಬರ್ಬರ ಕೊಲೆ..! - ಜೈಲು ವಾಸ

ಕಲಬುರಗಿಯಲ್ಲಿ ಮತ್ತೆ ಹರಿದ ನೆತ್ತರು- ನ್ಯಾಯವಾದಿ ಮಹಿಳೆ ಬರ್ಬರ ಕೊಲೆ- ಪೊಲೀಸ​ರಿಂದ ತೀವ್ರಗೊಂಡ ತನಿಖೆ

majat sultan
ಮಜತ್ ಸುಲ್ತಾನ್ ಕೊಲೆಗೀಡಾದ ಮಹಿಳೆ
author img

By

Published : Mar 22, 2023, 8:47 PM IST

Updated : Mar 23, 2023, 7:30 AM IST

ನ್ಯಾಯವಾದಿಯ ಕೊಲೆ ಪ್ರಕರಣ

ಕಲಬುರಗಿ: ನಗರದ ಹಾಗರಗಾ ಕ್ರಾಸ್ ಬಳಿ ಹಾಡಹಗಲೇ ಮಹಿಳಾ ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆಗೈದಿರುವ ಘಟನೆ ನಡೆದಿದೆ. ಮಜತ್ ಸುಲ್ತಾನ್ (35) ಕೊಲೆಯಾದ ಮಹಿಳೆ. ಮಹಿಳೆ ಬೈಕ್‌ಗೆ ಕಾರ್‌ನಿಂದ ಗುದ್ದಿ ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ ಮಾಡಲಾಗಿದೆ. ನಗರದ ಜಂಜಂ ಕಾಲೋನಿ ನಿವಾಸಿಯಾಗಿದ್ದ ಮಜತ್ ಸುಲ್ತಾನ್, ಸಾಮಾಜಿಕ ಕಾರ್ಯಕರ್ತೆ ಹಾಗೂ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು‌. ಆಸ್ತಿಯ ವಿಚಾರವಾಗಿ ಅಜೀಮ್ ಗೌಂಡಿ, ವಸೀಮ್ ಗೌಂಡಿ, ನಯೀಮ್‌ ಮತ್ತು ನದೀಮ್ ಸೇರಿ‌ ಕೊಲೆ‌ ಮಾಡಿದ್ದಾರೆಂದು ಕೊಲೆಗೀಡಾದ ಮಜತ್ ಸುಲ್ತಾನ್ ಅವರ ಪತಿ ಸದ್ದಾಂ ಆರೋಪಿಸಿದ್ದಾರೆ.

ನಯೀಮ್‌ ಮತ್ತು ನದೀಮ್ ಇಬ್ಬರು ಸದ್ದಾಂನ ಸಹೋದರರು ಆಗಿದ್ದು, ಆಸ್ತಿ ವಿಚಾರದಲ್ಲಿ ಕಲಹ ನಡೆದಿತ್ತು.‌ ಇವರಿಬ್ಬರಿಗೆ ಸೋಶಿಯಲ್‌ ಮಿಡಿಯಾದಲ್ಲಿ ವಾರ್ತೆ ನಡೆಸುತ್ತಿದ್ದ ಅಜೀಮ್ ಗೌಂಡಿ, ವಸೀಮ್ ಗೌಂಡಿ ಸಹಾಯ ಮಾಡ್ತಿದ್ರು. ಆಸ್ತಿ ವಿಚಾರವಾಗಿ ಅವರು ನಮ್ಮ ವಿರುದ್ಧು ದೂರು ದಾಖಲಿಸಿದ್ದ ವೇಳೆ ಈ ಹಿಂದೆ ಎರಡು ಬಾರಿ ನಾವು (ಸದ್ದಾಂ ಹಾಗೂ ಮಜತ್ ಸುಲ್ತಾನ್) ಜೈಲು ವಾಸ ಅನುಭವಿಸಿ ಬಂದಿದ್ದೆವು. ಆದ್ರೆ ನಾವು ಈಗ ದೂರು ದಾಖಲಿಸಿದರೂ ಸಹ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದ್ದಾಂ ಆರೋಪಿಸಿದ್ದಾರೆ.

ಆಸ್ತಿ ವಿಚಾರದಲ್ಲಿ ಗಲಾಟೆ ನಡೆದ ಹಿನ್ನೆಲೆ ಸದ್ದಾಂ ದಂಪತಿ ಬೇರೆಯ ಬಡಾವಣೆಗೆ ಶಿಫ್ಟ್ ಆಗಿದ್ದು, ಇಂದು ಮನೆ ಖಾಲಿ ಮಾಡಿ ಟಂ ಟಂ ವಾಹನದಲ್ಲಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಟಂಟಂ ಹಿಂದೆ ಬೈಕ್ ಮೇಲೆ ಮಜತ್ ಸುಲ್ತಾನ್ ಹೋಗುವಾಗ ಹಗೆತನ ಸಾಧಿಸಿ ಕಾರ್‌ನಲ್ಲಿ ಬಂದ ನಾಲ್ವರು ಡಿಕ್ಕಿ‌ ಹೊಡೆದು ಬೈಕ್ ನೆಲಕ್ಕೆ ಬಿಳುತ್ತಿದ್ದಂತೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆಂದು ಮೃತಳ ಪತಿ ಸದ್ದಾಂ ಅಪಾದನೆ ಮಾಡಿದ್ದಾರೆ.

ಮಹಿಳೆ ಹತ್ಯೆಗೈದ ಸ್ಥಳಕ್ಕೆ ಪೊಲೀಸ್ ಕಮಿಷನರ್ ಚೇತನ್ ಆರ್, ಡಿಸಿಪಿ ಆಡೂರು ಶ್ರೀನಿವಾಸಲು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.‌ ಡಾಗ್ ಸ್ಕಾಡ್, ಬೆರಳಚ್ಚು ತಂಡದವರು ಸಹ ಆಗಮಿಸಿ ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತಾಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಈ ಬಗ್ಗೆ ಮಾತನಾಡಿರುವ ಎಸ್​ಪಿ, ಮಹಿಳೆ ಕೊಲೆ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಾಗಿದೆ. ಮಹಿಳೆಯು ವಕೀಲೆ ಎಂಬುದು ಗೊತ್ತಾಗಿದೆ. ಅಪರಿಚಿತ ವ್ಯಕ್ತಿಗಳು ಬಂದು ಕೊಲೆ ಮಾಡಿದ್ದಾರೆ. ಕೊಲೆ ಹೇಗೆ ಮಾಡಲಾಗಿದೆ. ಇದರ ಹಿಂದಿನ ಕಾರಣ ಏನು ಎಂಬುದು ತನಿಖೆ ವೇಳೆ ಬಯಲಿಗೆ ಬರಲಿದೆ. ಮಹಿಳೆಯ ಗಂಡನನ್ನು ವಿಚಾರಿಸಿದಾಗ ಅವರು ಕೆಲವು ಆರೋಪಗಳನ್ನು ಮಾಡಿದ್ದಾರೆ. ಗಂಡನ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಎಫ್​ಎಸ್​ಎಲ್​ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಸಾಮಗ್ರಿಗಳನ್ನು ಶಿಫ್ಟ್​ ಮಾಡುವಾಗ ಕೊಲೆ ಮಾಡಿರುವುದು ಗೊತ್ತಾಗಿದೆ.

ಇದನ್ನೂಓದಿ:ಆಗ ಹೆಂಡತಿ ಕಾಣೆ ಎಂದು ಗಂಡ ದೂರು: ಈಗ ಪತಿ ನಾಪತ್ತೆ ಎಂದು ಪೊಲೀಸ್​ ಮೊರೆ ಹೋದ ಪತ್ನಿ!

Last Updated : Mar 23, 2023, 7:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.