ETV Bharat / state

ILI ಹಾಗೂ SARI ಪ್ರಕರಣಗಳ ಮಾಹಿತಿ ನೀಡದ 2‌ ಖಾಸಗಿ ಆಸ್ಪತ್ರೆಗಳ ನೋಂದಣಿ ರದ್ದು

author img

By

Published : Jul 9, 2020, 10:16 PM IST

ILI ಹಾಗೂ SARI ಲಕ್ಷಣವಿರುವ ರೋಗಿಗಳ ಮಾಹಿತಿಯನ್ನು ಅಂತರ್ಜಾಲದಲ್ಲಿ ಅಥವಾ ಲಿಖಿತವಾಗಿ ಸಲ್ಲಿಸದ ಕಾರಣ ಕಲಬುರಗಿಯ 2 ಖಾಸಗಿ ಆಸ್ಪತ್ರೆಗಳ ನೋಂದಣಿಯನ್ನು ಕೆ.ಪಿ.ಎಂ.ಇ ಕಾಯ್ದೆ 2017ರ ಅನ್ವಯ ರದ್ದುಪಡಿಸಲಾಗಿದೆ.

Kalaburagi
ಡಾ. ಎಂ.ಎ. ಜಬ್ಬಾರ್

ಕಲಬುರಗಿ: ಕೋವಿಡ್-19 ವೈರಾಣು ಹರಡುವಿಕೆಯನ್ನು ನಿಯಂತ್ರಿಸಲು ಅನುಕೂಲವಾಗುವಂತೆ ಆಸ್ಪತ್ರೆಗೆ ಬರುವ ILI ಮತ್ತು ತೀವ್ರ ಉಸಿರಾಟದ ತೊಂದರೆ (SARI) ಲಕ್ಷಣವಿರುವ ರೋಗಿಗಳ ಮಾಹಿತಿಯನ್ನು ಅಂತರ್ಜಾಲದಲ್ಲಿ ಅಥವಾ ಲಿಖಿತವಾಗಿ ಸಲ್ಲಿಸದ ಕಾರಣ ನಗರದ 2 ಖಾಸಗಿ ಆಸ್ಪತ್ರೆಗಳ ನೋಂದಣಿಯನ್ನು ಕೆ.ಪಿ.ಎಂ.ಇ ಕಾಯ್ದೆ 2017ರ ಅನ್ವಯ ರದ್ದುಪಡಿಸಲಾಗಿದೆ.

ಮಾಹಿತಿ‌ ನೀಡದ ಹಿನ್ನೆಲೆ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ.ಜಬ್ಬಾರ್ ನೋಂದಣಿಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಕೊರೊನಾ ಸೋಂಕು ನಿಯಂತ್ರಣದಲ್ಲಿಡಲು ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಕಾಯ್ದೆ 2017ರ ಅನ್ವಯ ನೋಂದಣಿ ಮಾಡಿಕೊಂಡಿರುವ ಆಸ್ಪತ್ರೆಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿ ILI ಮತ್ತು SARI ಲಕ್ಷಣವಿರುವ ಪ್ರಕರಣಗಳು ಕಂಡು ಬಂದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ತಿಳಿಸಲಾಗಿತ್ತು.

ಆದರೆ ಎರಡೂ ಆಸ್ಪತ್ರೆಗಳು ಮಾಹಿತಿ ನೀಡದೇ ಇರುವ ಕಾರಣ ನೋಂದಣಿಯನ್ನು ರದ್ದುಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.