ಕಲಬುರಗಿ: ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಎಐಎಂಐಎಂನ ಮುಖಂಡ ಗುರುಶಾಂತ ಪಟ್ಟೇದಾರ್ಗೆ ಎಸ್ಐಟಿ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನಲ್ಲಿ ನಡೆದ ಪೌರತ್ವ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಲಿಯೋನ್ ಪಾಕ್ ಪರ ಘೋಷಣೆ ಕೂಗಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದ ಆಯೋಜಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪೈಕಿ ಕಲಬುರಗಿಯ ಎಐಎಂಐಎಂ ಮುಖಂಡ ಗುರುಶಾಂತ ಪಟ್ಟೇದಾರ್ ಅವರಿಗೂ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಅಮೂಲ್ಯ ಪಾಕ್ ಪರ ಘೋಷಣೆ ಕೂಗುವ ಐದು ನಿಮಿಷಗಳ ಮುಂಚೆ ಪಟ್ಟೇದಾರ್ ಭಾಷಣ ಮಾಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ. ನಾಳೆ ಖುದ್ದು ಹಾಜರಾಗಿ ಪೊಲೀಸರಿಗೆ ವಿವರಣೆ ನೀಡಲಿರೋದಾಗಿ ಪಟ್ಟೇದಾರ್ ತಿಳಿಸಿದ್ದಾರೆ.