ETV Bharat / state

ಶಾಲೆಗೆ ಬರದಿದ್ದರೂ ಶಿಕ್ಷಕನಿಗೆ ಸ್ಯಾಲರಿ; ನಿವೃತ್ತ ಅಧಿಕಾರಿ ಸೇರಿ ನಾಲ್ವರ ವಿರುದ್ಧ ಕ್ರಮ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೆರಿ ಅಂಬಲಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರೇಣುಕಾಚಾರ್ಯ ಸತತ 11 ತಿಂಗಳು ಶಾಲೆಗೆ ಗೈರಾಗಿದ್ದರು.

Education Department
ಶಿಕ್ಷಣ ಇಲಾಖೆ
author img

By ETV Bharat Karnataka Team

Published : Nov 26, 2023, 7:54 PM IST

ಕಲಬುರಗಿ: ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕೆಲವೊಮ್ಮೆ ಪ್ರಮಾದಗಳು ನಡೆಯುತ್ತವೆ. ಆದರೆ ಇಲ್ಲೊಬ್ಬ ಸಹ ಶಿಕ್ಷಕನು ಶಾಲೆಗೆ ಬರೋಬ್ಬರಿ 11 ತಿಂಗಳು ಗೈರಾಗಿದ್ದರೂ ಆತನಿಗೆ ವೇತನ ಪಾವತಿಸಿ ಶಿಕ್ಷಣ ಇಲಾಖೆ ಪ್ರಮಾದ ಎಸಗಿರುವ ಆರೋಪ ಸಾಬೀತಾಗಿದೆ. ಈ ತಪ್ಪಿನ ಹಿನ್ನೆಲೆ ಮೂವರು ಅಧಿಕಾರಿ ಸಿಬ್ಬಂದಿಯನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ಹಾಗೂ ಒಬ್ಬ ನಿವೃತ್ತ ಬಿಇಒಗೆ ನಿವೃತ್ತಿ ವೇತನದಲ್ಲಿ ಶಾಶ್ವತವಾಗಿ ಶೇ 50ರಷ್ಟು ವೇತನ ತಡೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ಆಳಂದ ತಾಲೂಕಿನ ಕೆರಿ ಅಂಬಲಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರೇಣುಕಾಚಾರ್ಯ ಅವರು ಶಾಸಕರೊಬ್ಬರ ಸಹೋದರನಾಗಿದ್ದು, ಸತತ 11 ತಿಂಗಳು ಶಾಲೆಗೆ ಗೈರಾಗಿದ್ದರು. ಆದರೆ ಅವರಿಗೆ ವೇತನ ಬಿಡುಗಡೆ ಮಾಡಿದ ಆರೋಪ ಸಾಬೀತು ಆಗಿದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ, ಪ್ರಥಮ ದರ್ಜೆ ಸಹಾಯಕ ಲೋಕಪ್ಪ ಜಾಧವ, ಗುರುರಾಜರಾವ್ ಕುಲಕರ್ಣಿ ಅವರನ್ನು ಸೇವೆಯಿಂದ ಇಲಾಖೆ ಕಡ್ಡಾಯ ನಿವೃತ್ತಿಗೊಳಿಸಿದೆ.

ಈ ಅವಧಿಯಲ್ಲಿ ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಭರತರಾಜ ಸಾವಳಗಿ ಅವರು ಇತ್ತೀಚೆಗೆ ನಿವೃತ್ತಿ ಆಗಿದ್ದು, ಅವರಿಗೆ ಬರುವ ವೇತನದಲ್ಲಿ ಶಾಶ್ವತವಾಗಿ ಶೇ 50ರಷ್ಟು ನಿವೃತ್ತಿ ವೇತನ ತಡೆಹಿಡಿಯಲಾಗಿದೆ.

ಸಹ ಶಿಕ್ಷಕ ರೇಣುಕಾಚಾರ್ಯ ಅವರು 2011ರ ಅಕ್ಟೋಬರ್‌ನಿಂದ 2012ರ ಆಗಸ್ಟ್‌ ವರೆಗೆ ಕೆರಿ ಅಂಬಲಗಾ ಗ್ರಾಮದ ಶಾಲೆಗೆ ಹಾಜರಾಗಿರಲಿಲ್ಲ. ಆಗ ವೇತನ ಬಿಡುಗಡೆ ಮಾಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆಗಿದ್ದ ಭರತರಾಜ ಸಾವಳಗಿ, ಚಿತ್ರಶೇಖರ್ ದೇಗಲಮಡಿ, ವೆಂಕಯ್ಯ ಇನಾಮದಾರ, ಹಿಂದಿನ ವಲಯ ಸಹಾಯಕ ಶಿಕ್ಷಣಾಧಿಕಾರಿ ಜೈ ಪ್ರಕಾಶ ಅಕ್ಕಿ, ಪ್ರಥಮ ದರ್ಜೆ ಸಹಾಯಕ ಲೋಕಪ್ಪಾ ಜಾಧವ, ಗುರುರಾಜರಾವ್ ಕುಲಕರ್ಣಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹೆಚ್ಚುವರಿ ಆಯುಕ್ತರು ಕರಡು ದೋಷಾರೋಪ ಪಟ್ಟಿ ತಯಾರಿಸಿದ್ದರು‌. ತನಿಖೆ ಬಳಿಕ ನಾಲ್ವರ ವಿರುದ್ಧ ಕ್ರಮ‌ ಜರುಗಿಸಲಾಗಿದೆ.

ಸದ್ಯ ಚಿತ್ರಶೇಖರ್ ದೇಗಲಮಡಿ ಯಾದಗಿರಿ ಡಿಡಿಪಿಐ ಕಚೇರಿ ಸಮಗ್ರ ಶಿಕ್ಷಣ ಕರ್ನಾಟಕದ ಡಿವೈಪಿಪಿಯಾಗಿ, ಗುರು ರಾಜರಾವ್ ಕುಲಕರ್ಣಿ ಕಲಬುರಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ, ಲೋಕಪ್ಪ ಜಾಧವ ಆಳಂದ ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ಯೋಜನೆಯ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಇದನ್ನೂಓದಿ:ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.