ಕಲಬುರಗಿ : ಕಾಂಗ್ರೆಸ್ನವರು ನೀಡಿದ ಮಾನಸಿಕ ಚಿತ್ರಹಿಂಸೆಯಿಂದಲೇ ತಮ್ಮ ಕಿರಿಯ ಪುತ್ರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ ಎಂದು ಮಾಜಿ ಶಾಸಕ, ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಪೂರ್ವದಲ್ಲಿ ನಮ್ಮ ವಿರುದ್ಧ ಕಾಂಗ್ರೆಸ್ನವರು ಮಾಡಿದ್ದ ಸುಳ್ಳು ಆರೋಪಗಳು ಮಗಳ ಪರೀಕ್ಷಾ ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದವು. ಆಕೆ ಮಾನಸಿಕ ಚಿತ್ರಹಿಂಸೆ ಅನುಭವಿಸಿದ್ದಳು. ಹಾಗಾಗಿ ರ್ಯಾಂಕ್ ನಲ್ಲಿ ಪಾಸ್ ಆಗ್ತಿದ್ದವಳು ಈ ಬಾರಿ ಪಿಯುಸಿಯಲ್ಲಿ ಫೇಲ್ ಆಗಿದ್ದಾಳೆ ಎಂದು ಉಮೇಶ್ ಜಾಧವ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.