ಕಲಬುರಗಿ: ಹಿಂದೂ - ಮುಸ್ಲಿಮರ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಲವೆಡೆ ಸೇರಿದ ಮುಸ್ಲಿಮರು ‘ಮಾತಂ’ ಆಚರಿಸುವ ಮೂಲಕ ತಮ್ಮವರನ್ನು ಸ್ಮರಿಸಿಕೊಂಡರು.
ಮೊಹರಂ ಅಂಗವಾಗಿ ಜಿಲ್ಲೆಯ ಮರತೂರು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಪೀರ್ ದೇವರುಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ವಿವಿಧೆಡೆ ಸಂಚರಿಸಿದ ಪೀರ್ ದೇವರುಗಳಿಗೆ ನಮಿಸಿದ ಜನತೆ ಕಾಯಿ, ಊದು, ಸಕ್ಕರೆ ಲೋಬನ್ ಕೊಟ್ಟು ಇಷ್ಟಾರ್ಥಸಿದ್ಧಿಗೆ ಪ್ರಾರ್ಥಿಸಿದರು.
ಬೆಂಕಿಯ ಕೆಂಡದಲ್ಲಿ ಹಾಯ್ದು ಕೆಲವರು ಭಕ್ತಿ ಸಮರ್ಪಿಸಿದರು. ಹಿಂದೂ - ಮುಸ್ಲಿಮರು ಜೊತೆಯಾಗಿ ಅಲಾವಿ ಕುಣಿತಕ್ಕೆ ಹೆಜ್ಜೆ ಹಾಕಿದರು. ಒಟ್ಟಾರೆ ಮೊಹರಂ ಕೊನೆಯ ದಿನವಾದ ಮಂಗಳವಾರದಂದು ದಫನ್ ಮಾಡುವುದರೊಂದಿಗೆ ಹಬ್ಬದ ಸಂಭ್ರಮಕ್ಕೆ ತೆರೆ ಬಿದ್ದಿತು.
ಇದನ್ನೂ ಓದಿ: ಅದ್ಧೂರಿ ಮೊಹರಂ ಆಚರಣೆ : ಭಕ್ತರಿಂದ ಕೆಂಡ ಸೇವೆ, ಗಮನಸೆಳೆದ ಪಂಜಾ ಮೆರವಣಿಗೆ