ಕಲಬುರಗಿ: ಬೀದಿನಾಯಿ ದಾಳಿಯಿಂದ ಮೃತಪಟ್ಟ ಮಂಗನ ಕಳೇಬರಕ್ಕೆ ಗ್ರಾಮಸ್ಥರು ಸೇರಿಕೊಂಡು ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದಿದೆ.
ಕಳೆದ ಹಲವು ದಿನಗಳಿಂದ ಗ್ರಾಮಸ್ಥರೊಂದಿಗೆ ಪ್ರೀತಿಯಿಂದ ಇರುತ್ತಿದ್ದ ಮಂಗನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿದ್ದವು. ಆಂಜನೇಯ ಸ್ವರೂಪಿ ಎಂದೇ ಹೇಳಲಾಗುವ ಕೋತಿಯ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದು, ರಾತ್ರಿಯಿಡೀ ಭಜನೆ ಮಾಡಿದ್ದಾರೆ.
ಕಳೇಬರಕ್ಕೆ ಮನುಷ್ಯರ ಶವಕ್ಕೆ ಮಾಡುವಂತೆ ಸ್ನಾನ ಮಾಡಿಸಿ, ಕುರ್ಚಿ ಮೇಲೆ ಕುಳ್ಳಿರಿಸಿ, ಪೇಟ ತೊಡಿಸಿ, ಹೂ ಮಾಲೆ ಹಾಕಿ ಸಂಪ್ರದಾಯದಂತೆ ಭಕ್ತಿಯಿಂದ ಪೂಜೆ ನೆರವೇರಿಸಿದರು.
ಈ ವೇಳೆ ಅನ್ನ ಸಂತರ್ಪಣೆಯೂ ನಡೆಯಿತು. ನಂತರ ಅಂತ್ಯಕ್ರಿಯೆ ಮಾಡುವ ಮೂಲಕ ಅರಳಗುಂಡಗಿ ಗ್ರಾಮಸ್ಥರು ಮಾನವೀಯತೆ ಮೆರೆದರು.
ಇದನ್ನೂ ಓದಿ: 6 ವರ್ಷದ ಪೋರಿಗೆ ಡಾಕ್ಟರೇಟ್ ಗರಿ.. ಈಕೆಯ ಅದ್ಭುತ ನೆನಪಿನ ಶಕ್ತಿಗೆ ಪುನೀತ್ ರಾಜ್ಕುಮಾರ್ ಫಿದಾ..