ETV Bharat / state

ಗ್ರಾಹಕರ ಮೊಬೈಲ್ ಎಗರಿಸಿ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದ ಖದೀಮರು ಅರೆಸ್ಟ್​

ಗ್ರಾಹಕರ ಗೂಗಲ್ ಪೇ, ಫೋನ್​ ಪೇ, ಯುಪಿಐ ಪಾಸ್​ವರ್ಡ್​ ಮೇಲೆ ಕಣ್ಣು- ಮೊಬೈಲ್​ ಕಳ್ಳತನ- ಕಲಬುರಗಿಯಲ್ಲಿ ಸಿಕ್ಕಿಬಿದ್ದ ಖದೀಮರು

ಕಿರಣ್ ಅಲಿಯಾಸ್ ಸಾತಪಾಟಿ ಮತ್ತು ಶಿವಾ ಅಲಿಯಾಸ್ ಶಿವಾಜಿ

author img

By

Published : Jul 25, 2022, 5:10 PM IST

ಕಲಬುರಗಿ: ಅವರಿಬ್ಬರು ಫೀಲ್ಡಿಗಿಳಿದ್ರೆ ಸಾಕು, ಬೇರೆಯವರ ಮೊಬೈಲ್ ಮಾಯ ಮಾಡಿಬಿಡ್ತಿದ್ರು. ಮೊಬೈಲ್ ಕದ್ದ ಮೇಲೆ ಸುಮ್ಮನಿರೋಕೆ ಆಗುತ್ತಾ? ಹೀಗೆ ಮೊಬೈಲ್‌‌ಗಳನ್ನ ಕದಿಯುತ್ತಿದ್ದ ಅವರು, ಯುಪಿಐ ಪಾಸ್‌ವಾರ್ಡ್‌ಗಳನ್ನ ಗಮನಿಸಿ ಫೋನ್ ಪೇ ಮತ್ತು ಗೂಗಲ್ ಪೇಗಳಲ್ಲಿ ಲಕ್ಷ ಲಕ್ಷ ರೂಪಾಯಿಯನ್ನ ದೋಚುತ್ತಿದ್ದರು. ಇದೀಗ ಆ ಗ್ಯಾಂಗ್​ ಅನ್ನು ಕಲಬುರಗಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಎಸ್​ಪಿ ಇಶಾ ಪಂತ್ ಅವರು ಮಾತನಾಡಿರುವುದು

ಕಿರಣ್ ಅಲಿಯಾಸ್ ಸಾತಪಾಟಿ ಮತ್ತು ಶಿವಾ ಅಲಿಯಾಸ್ ಶಿವಾಜಿ ಬಂಧಿತ ಆರೋಪಿಗಳು. ಮೂಲತಃ ಇವರು ನೆರೆಯ ತೆಲಂಗಾಣ ರಾಜ್ಯದವರು. ಹಲವಾರು ವರ್ಷಗಳಿಂದ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾಕಷ್ಟು ತಲ್ಲಣ ಉಂಟು ಮಾಡ್ತಿದ್ದ ಇವರಿಬ್ಬರನ್ನು ಕಲಬುರಗಿ ಜಿಲ್ಲಾ ಸೆನ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಏನಿದು ಪ್ರಕರಣ?.. ಬಂಧಿತರಿಬ್ಬರು ವಿವಿಧೆಡೆ ಶಾಪಿಂಗ್ ಮಾಲ್‌ಗಳು, ಜನರಲ್ ಸ್ಟೋರ್‌ಗಳು, ಬಟ್ಟೆ ಅಂಗಡಿಗಳು ಸೇರಿದಂತೆ ವಿವಿಧೆಡೆ ಮಾರುಕಟ್ಟೆ ಪ್ರದೇಶಗಳಲ್ಲಿ ಓಡಾಡುತ್ತಿದ್ದರು. ಸಾರ್ವಜನಿಕರು ವಸ್ತುಗಳನ್ನ ಖರೀದಿ ಮಾಡಿ ಮೊಬೈಲ್‌ನಿಂದ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಹಣವನ್ನ ಬಾರ್ ಕೋಡ್‌ನಲ್ಲಿ ಸ್ಕ್ಯಾನ್ ಮಾಡುವಾಗ ಅವರ ಪಕ್ಕದಲ್ಲೇ ನಿಂತು ಯುಪಿಐ ಕೋಡ್‌ನ್ನ ಕದ್ದು ನೋಡುತ್ತಿದ್ದರು. ನಂತರ ಗ್ರಾಹಕರನ್ನ ಹಿಂಬಾಲಿಸಿ ಅವರ ಮೊಬೈಲ್‌ನ್ನ ಎಗರಿಸಿ ಯುಪಿಐ ಪಾಸ್​ವರ್ಡ್​ ಬಳಸಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು.

ಕೆಲ ದಿನಗಳ ಹಿಂದಷ್ಟೇ ಕಲಬುರಗಿ ನಗರದ ಇಬ್ಬರು ವ್ಯಕ್ತಿಗಳು ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಸ್ಕ್ಯಾನ್ ಮಾಡುವಾಗ ಯುಪಿಐ ನಂಬರ್‌ನ್ನು ಈ ಖದೀಮರು ಕದ್ದು ನೋಡಿದ್ದರು. ತಕ್ಷಣವೇ ಅವರಿಬ್ಬರ ಮೊಬೈಲ್ ಕಳ್ಳತನ ಮಾಡಿ ಅವರ ಅಕೌಂಟ್‌ನಲ್ಲಿದ್ದ ಸುಮಾರು ಎರಡು ಲಕ್ಷ ರೂಪಾಯಿ ಹಣವನ್ನ ತಮ್ಮ ಖಾತೆಗೆ ಟ್ರಾನ್ಸ್‌ಫರ್ ಮಾಡಿಕೊಂಡಿದ್ದರು.

ಚೋರ್ ಬಜಾರ್‌ನಲ್ಲಿ ಮಾರಾಟ: ಇದೀಗ ಆ ಎರಡು ಪ್ರಕರಣಗಳನ್ನ ಭೇದಿಸಿರುವ ಸೆನ್ ಠಾಣೆ ಪೊಲೀಸರು ಎರಡು ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ. ಹಣವನ್ನ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡ ನಂತರ ಮೊಬೈಲ್‌ನ ಸ್ಪೇರ್‌ಪಾರ್ಟ್ಸ್‌ಗಳನ್ನ ಬೇರೆ ಬೇರೆ ಮಾಡಿ ಹೈದರಾಬಾದ್ ನಗರದ ಚೋರ್ ಬಜಾರ್‌ನಲ್ಲಿ ಮಾರಾಟ ಮಾಡುತ್ತಿದ್ದರು.

3.52 ಲಕ್ಷ ರೂಪಾಯಿ ಮೌಲ್ಯದ ವಸ್ತು ವಶ: ಇಬ್ಬರು ಚಾಲಾಕಿಗಳು ಅಂತಾರಾಜ್ಯ ಕಳ್ಳರನ್ನ ಬಂಧಿಸಿರುವ ಪೊಲೀಸರು ಬಂಧಿತರಿಂದ ಫೋರ್ಡ್​ ಕಾರು, 22 ಮೊಬೈಲ್ ಸೇರಿದಂತೆ ಒಟ್ಟು 3.52 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದು, ಎಲ್ಲೆಲ್ಲಿ‌ ಎಷ್ಟೆಷ್ಟು ಮೊಬೈಲ್‌‌ಗಳನ್ನ ಕದ್ದು ಹಣವನ್ನ ನುಂಗಿ ನೀರು ಕುಡಿದಿದ್ದಾರೆಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಗ್ಯಾಂಗ್ ಕೇವಲ ರಾಜ್ಯವಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ವಿವಿಧೆಡೆ ತಮ್ಮ ಕೈಚಳಕ ತೋರಿಸುತ್ತಿದ್ದರು ಎಂದು ಎಸ್ಪಿ ಇಶಾ ಪಂತ್ ಹೇಳಿದ್ದಾರೆ.

ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ಕಲಬುರಗಿ ನಗರ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದ ಸಿಐಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.