ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗೂ ದೇಶದ್ರೋಹಿ ಪಿ.ಎಫ್.ಐ ಹೇಳಿಕೆಗೂ ವ್ಯತ್ಯಾಸ ಇಲ್ಲ ಎಂದು ಕುಟುಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾಧಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಿರುವುದರಿಂದ ನಿಧಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಂಬೇಡ್ಕರ್ ಬಿಟ್ರೆ ನಾನೇ ಸಂವಿಧಾನ ತಿಳಿದು ಕೊಂಡಿದ್ದು ಎನ್ನುವ ಹಾಗೆ ಮಾತಾಡತ್ತಾರೆ. ರಾಮಮಂದಿರ ರಾಜಕೀಯಕ್ಕೆ ಬಳಸಿಕೊಂಡು ಜನರ ಭಾವನೆಗೆ ಅಪಮಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನ್ಯಾಯಾಲಯಕ್ಕೂ ಬೆಲೆ ಕೊಡವುದಿಲ್ಲ ಎಂದರೆ ಏನು ಅರ್ಥ, ಇತ್ತ ಈ ದೇಶದ ಜನರ ಭಾವನೆಗಳಿಗೂ ಸಿದ್ದರಾಮಯ್ಯ ಬೆಲೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು.
ಹಿಂದೆ ಗೋಹತ್ಯೆ ಮಾಡುವವರಿಗೆ ಸಿದ್ದರಾಮಯ್ಯ ರಕ್ಷಿಸಿದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಈಗ ರಾಮಮಂದಿರ ವಿಚಾರದಲ್ಲೂ ಹಣ ಕೊಡೊದಿಲ್ಲ ಅಂತ ಹೇಳಿ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ನಿರ್ಣಾಮಕ್ಕೆ ಸಿದ್ದರಾಮಯ್ಯ ಒಬ್ಬರು ಸಾಕು, ನಾನೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ, ಹಾಗಾದ್ರೆ ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್ ಹಿರಿಯ ನಾಯಕರು ಮೌನವಾಗಿರೋದು ಏಕೆ ? ಎಂದು ಪ್ರಶ್ನಿಸಿದರು.
ಹಣ ಕೊಡದವರ ಮನೆಗೆ ಮಾರ್ಕ್: ರಾಮ ಮಂದಿರ ನಿರ್ಮಾಣಕ್ಕೆ ಹಣ ಕೊಡದವರ ಮನೆಗೆ ಮಾರ್ಕ್ ಮಾಡಲಾಗುತ್ತಿದೆ ಎಂಬ ಹೆಚ್.ಡಿ.ಕೆ ಹೇಳಿಕೆಗೂ ಈಶ್ವರಪ್ಪ ತೀರುಗೇಟು ನೀಡಿದರು. ಕುಮಾರಸ್ವಾಮಿಗೆ ಯಾರಾದ್ರೂ ಧಮಕಿ ಹಾಕಿದ್ರೆ ದೂರು ಕೊಡಲಿ, ಮಾಜಿ ಸಿಎಂಗಳಿಬ್ಬರೂ ಘನತೆಗೆ ತಕ್ಕಂತೆ ಮಾಡನಾಡೋದು ಕಲಿಯಲಿ. ದೇಶದಲ್ಲಿ ಹಣ ಕೊಡದವರ ಮನೆಗೆ ಮಾರ್ಕ್ ಮಾಡಿಲ್ಲ, ಹಣ ಕೊಟ್ಟವರಿಗೆ ರಶೀದಿ ನೀಡಲಾಗುತ್ತಿದೆ ಅದನ್ನು ಕೆಲವರು ಅಭಿಮಾನದಿಂದ ಮನೆಗೆ ಹಚ್ಚಿಕೊಂಡಿರಬಹುದು ಎಂದರು.
ಓದಿ : ಮಹಾರಾಷ್ಟ್ರ, ಕೇರಳ ಗಡಿ ಬಳಿಯ ರಾಜ್ಯದ 10 ಜಿಲ್ಲೆಗಳಲ್ಲಿ ತೀವ್ರ ನಿಗಾ: ಸಚಿವ ಸುಧಾಕರ್
ಪಿಎಫ್ಐ ಬ್ಯಾನ್ ಬಗ್ಗೆ ಚರ್ಚೆ: ಆರ್‌ಎಸ್‌ಎಸ್ ನಿರ್ನಾಮ ಮಾಡಲು ಇಂದಿರಾಗಾಂಧಿ ಕಾಲದಿಂದಲೂ ಪ್ರಯತ್ನ ನಡೆದಿದೆ, ಆದರೆ ಸಾಧ್ಯವಾಗಿಲ್ಲ. ಪಿಎಫ್‌ಐ ರಾಷ್ಟ್ರದ್ರೋಹಿ ಸಂಘಟನೆ, ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡಿದೆ. ಪಿಎಫ್‌ಐ ಪಾಕಿಸ್ತಾನ ಜಿಂದಾಬಾದ್ ಎಂದಾಗ ಓರ್ವ ಕಾಂಗ್ರೆಸ್ ವ್ಯಕ್ತಿಯೂ ವಿರೋಧಿಸಿಲ್ಲ ಪಿಎಫ್‌ಐ ಬ್ಯಾನ್ ಮಾಡುವ ಸಂಬಂಧ ಗೃಹ ಸಚಿವರೊಂದಿಗೆ ಚರ್ಚೆ ನಡೆಯುತ್ತಿದೆ ಎಂದರು.
ದೇಶದ ಆರ್ಥಿಕ ಪರಿಸ್ಥಿತಿ ಕೊರೊನಾದಿಂದ ಏರುಪೇರಾಗಿದೆ. ಇದನ್ನ ಕಂಟ್ರೋಲ್ ಮಾಡಲು ಕೇಂದ್ರ ಸರ್ಕಾರ ಕ್ರಮಗಳನ್ನ ಕೈಗೊಳ್ಳುತ್ತಿದೆ. ಬೆಲೆ ಏರಿಕೆಯಿಂದ ಜನರಿಗೆ ತೊಂದರೆಯಾಗದಂತೆ ನರೇಗಾ ಯೋಜನೆಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ರಾಮ ಮಂದಿರ ವಿಚಾರದಲ್ಲಿ ಲೆಕ್ಕ ಕೇಳುವ ಅಧಿಕಾರವಿಲ್ಲ: ದೇಶದ ಪ್ರಜೆಯಾಗಿ ರಾಮ ಮಂದಿರ ವಿಷಯದಲ್ಲಿ ಲೆಕ್ಕ ಕೇಳುತ್ತೇನೆ ಎಂದಿರುವ ಸಿದ್ದರಾಮಯ್ಯಗೆ ಲೆಕ್ಕ ಕೇಳುವ ಅಧಿಕಾರವಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ನೀರಿಕ್ಷೆಗೆ ಮಿರಿದ ಜನರು ಧನ ಸಹಾಯ ಮಾಡುತ್ತಿದ್ದಾರೆ. ಸ್ವತಃ ಕಾಂಗ್ರೆಸ್ ನಾಯಕರು ದೇಣಿಗೆ ಕೊಡುತ್ತಿದ್ದಾರೆ. 10 ರೂಪಾಯಿ ದೇಣಿಗೆ ನೀಡುವ ಕೂಲಿ ಮಾಡುವ ವ್ಯಕ್ತಿಗೆ ಲೆಕ್ಕ ಕೇಳುವ ಹಕ್ಕಿದೆ ಅಂತವರಿಗೆ ಲೆಕ್ಕ ಕೊಡುತ್ತೇವೆ. ಆದರೆ, ದೇಶದ ಪ್ರಜೆಯಾದ ಮಾತ್ರಕ್ಕೆ ಲೆಕ್ಕ ಕೇಳುತ್ತೇನೆ ಅಂದರೆ ಸಿದ್ದರಾಮಯ್ಯಗೆ ಲೆಕ್ಕ ಕೊಡುವ ಅಗತ್ಯವಿಲ್ಲ ನಮಗಿಲ್ಲ. ಸಿದ್ದರಾಮಯ್ಯ ಮೊದಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಗ್ಗೆ ಲೆಕ್ಕ ಕೇಳಲಿ. ಹಣ ಸಂಗ್ರಹ ಮಾಡ್ತಿರೊದಕ್ಕೆ ಡೋನೆಷನ್ ಅಂತಾ ಕರೆಯುವುದಿಲ್ಲ, ಇದು ನಿಧಿ ಸಮರ್ಪಣ ಕಾರ್ಯ, ಜನರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ನಿಧಿ ನೀಡುತ್ತಿದ್ದಾರೆ ಎಂದರು.
ಸಂವಿಧಾನದಲ್ಲಿ ಎಲ್ಲರಿಗೂ ಮೀಸಲಾತಿ ಕೇಳುವ ಹಕ್ಕಿದೆ. ಸ್ವಾತಂತ್ರ್ಯ ಪೂರ್ವದಿಂದ ಮಿಸಲಾತಿಗಳು ಇವೆ. ಅನೇಕ ಜಾತಿಯವರು ಮೀಸಲಾತಿ ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆ. ಮೀಸಲಾತಿ ಕೇಳಿದ ತಕ್ಷಣ ಸಿಗುವುದಿಲ್ಲ. ಅದರ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ ಅರ್ಹತೆ ಇರೋ ವರ್ಗಗಳಿಗೆ ಮೀಸಲಾತಿ ಸಿಕ್ಕೆ ಸಿಗುತ್ತೆ ಎಂದು ಈಶ್ವರಪ್ಪ ಹೇಳಿದರು.