ಕಲಬುರಗಿ : ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಚಿವರು ಬೆಂಗಾವಲು ವಾಹನದಲ್ಲಿ ಪ್ರಯಾಣಿಸಿ ಏರ್‌ಪೋರ್ಟ್ ತಲುಪಿದ ಘಟನೆ ನಡೆದಿದೆ.
ತಾಲೂಕಿನ ಫರ್ತಾಬಾದ್ ಹತ್ತಿರದಿಂದ ಸರಡಗಿ ಏರ್‌ಪೋರ್ಟ್‌ವರೆಗೆ ಸಚಿವರು ಬೆಂಗಾವಲು ಪಡೆ ವಾಹನದಲ್ಲಿ ತೆರಳಿದರು. ಸಚಿವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಬೆಂಗಾವಲು ವಾಹನದಲ್ಲಿ ತೆರಳಿದ್ದಾರೆ.
ಎರಡು ದಿನದಿಂದ ಕಲಬುರಗಿಯಲ್ಲಿದ್ದ ಸಚಿವ ಅಶ್ವತ್ಥ್ ನಾರಾಯಣ ಇಂದು ಯಾದಗಿರಿ ಜಿಲ್ಲೆಗೆ ತೆರಳಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಗಳ ನಂತರ ಕಲಬುರಗಿ ಏರ್‌ಪೋರ್ಟ್ ಮೂಲಕ ಬೆಂಗಳೂರಿಗೆ ತೆರಳಲು ವಾಪಸ್ ಬರುತ್ತಿದ್ದರು. ಈ ವೇಳೆ ಫರ್ತಾಬಾದ್ ಬಳಿ ಸಚಿವರಿದ್ದ ಕಾರು ಏಕಾಏಕಿ ನಿಂತು ಹೊಗಿದೆ.
ವಿಮಾನದ ಸಮಯವಾದ ಕಾರಣ ಮೆಕಾನಿಕ್ ಕರೆಯಿಸಿ ಕಾರು ರಿಪೇರಿ ಮಾಡುವಷ್ಟು ಸಮಯ ಕೂಡ ಇರಲಿಲ್ಲ. ಹೀಗಾಗಿ, ಬೆಂಗಾವಲು ಪಡೆ ವಾಹನದಲ್ಲಿ ಏರ್ಪೋರ್ಟ್ಗೆ ಸಚಿವರು ತಲುಪಿದರು.
ಸಚಿವರೊಂದಿಗೆ ಬರುತ್ತಿದ್ದ ಆಯುಕ್ತರ ಕಾರ್‌ನಲ್ಲಿ ಡೀಸೆಲ್ ಖಾಲಿ : ಇನ್ನೂ ಸಚಿವರೊಂದಿಗೆ ಬರುತ್ತಿದ್ದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ರವರು ಪ್ರಯಾಣಿಸುತ್ತಿದ್ದ ಕಾರಿನ ಡೀಸೆಲ್ ಖಾಲಿ ಆಗಿರುವ ಘಟನೆ ಕೂಡ ನಡೆಯಿತು.
ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಆಯುಕ್ತರಿಗೆ ಕಾರು ಒದಗಿಸಲಾಗಿತ್ತು. ಮಾರ್ಗ ಮಧ್ಯೆ ಡೀಸೆಲ್ ಖಾಲಿಯಾಗಿದ್ದರಿಂದ ಅನಿವಾರ್ಯವಾಗಿ ಬೇರೊಂದು ವಾಹನದಲ್ಲಿ ಏರ್‌ಪೋರ್ಟ್ ತಲುಪಿದರು.
ಇದನ್ನೂ ಓದಿ : ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ತೆರೆ ಎಳೆಯಲು ಸರ್ಕಾರ ನಿರ್ಧರಿಸಿದೆ : ಅಶ್ವತ್ಥ್ ನಾರಾಯಣ