ETV Bharat / state

ಎಂ ಬಿ ಪಾಟೀಲ್​ ರಾಜಕೀಯ ಕುರಿತು ಮಹತ್ವದ ಭವಿಷ್ಯ ನುಡಿದ್ರು ರೇವಣಸಿದ್ಧ ಶ್ರೀ - etv bharat

ಲೋಕಸಭಾ ಚುನಾವಣೆ ನಂತ್ರ ರಾಜಕೀಯದಲ್ಲಿ ಮಹತ್ತರ ಬದಲಾವಣೆ- ಎಂ ಬಿ ಪಾಟೀಲ್​ ಮುಖ್ಯಮಂತ್ರಿ ಆಗ್ತಾರೆ- ಶ್ರೀ ಗುರು ಚಿಕ್ಕವೀರೇಂದ್ರ ಸಂಸ್ಥಾನ ಮಠದ ರೇವಣಸಿದ್ದ ಶ್ರೀಗಳ ಭವಿಷ್ಯ- ಕಾಂಗ್ರೆಸ್​ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಶ್ರೀಗಳಲ್ಲಿ ಗೃಹ ಸಚಿವರ ಮನವಿ

ಎಂ.ಬಿ.ಪಾಟೀಲ್​ ಮತ್ತು ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳ ಭೇಟಿ
author img

By

Published : May 12, 2019, 1:06 PM IST

ಕಲಬುರಗಿ: ಪ್ರತ್ಯೇಕ ಲಿಂಗಾಯತ ಧರ್ಮ ವಿರೋಧಿ ಹೋರಾಟದ ನೇತೃತ್ವ ವಹಿಸಿದ್ದ ತಾಲೂಕಿನ ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕವೀರೇಂದ್ರ ಸಂಸ್ಥಾನ ಮಠದ ರೇವಣಸಿದ್ಧ ಶಿವಾಚಾರ್ಯರು ಇಂದು ಮಹತ್ವದ ರಾಜಕೀಯ ಭವಿಷ್ಯ ನುಡಿದಿದ್ದಾರೆ.

ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಯನ್ನು ಗೃಹ ಸಚಿವ ಎಂ. ಬಿ. ಪಾಟೀಲ್ ಭೇಟಿಯಾಗಿದ್ದರು. ಚಿಂಚೋಳಿ ಪ್ರಚಾರಕ್ಕೆಂದು ಆಗಮಿಸಿದ್ದ ಅವರು ಇನ್ನು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ರೇವಣಸಿದ್ದ ಶ್ರೀಗಳನ್ನು ಪಾಟೀಲ್​ ಭೇಟಿಯಾಗಿರುವುದು ರಾಜಕೀಯ ವಲಯದಲ್ಲೂ ಕುತೂಹಲ ಮೂಡಿಸಿದೆ.

ಭೇಟಿ ಸಮಯದಲ್ಲಿ ಮಾತನಾಡಿದ ಶ್ರೀಗಳು, ಸಮ್ಮಿಶ್ರ ಸರ್ಕಾರ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿದೆ. ಇನ್ನುಳಿದ ಸಮುದಾಯದವರನ್ನು ಕಡೆಗಣನೆ ಮಾಡಲಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಸರ್ಕಾರ ಬದಲಾವಣೆ ಖಚಿತ. ಗೃಹ ಸಚಿವರಾಗಿರುವ ಎಂ ಬಿ ಪಾಟೀಲ್​ ಅವರೇ ಮುಖ್ಯಮಂತ್ರಿಯಾಗೋ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದೇ ವೇಳೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ರೇವಣಸಿದ್ಧ ಶಿವಾಚಾರ್ಯರನ್ನುಎಂ ಬಿ ಪಾಟೀಲರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಹ ವೀರಶೈವ ಮಠಾಧೀಶರನ್ನು ಭೇಟಿ ಮಾಡಿದ್ದಾರೆ. ಸುಲೇಪೇಟೆ ಕಟ್ಟಂಗೇಶ್ವರ ಮಠದಲ್ಲಿ ಕಲಬುರಗಿ, ಬೀದರ್ ವೀರಶೈವ ಮಠಾಧೀಶರನ್ನು ಭೇಟಿಯಾಗಿರೋ ಖಂಡ್ರೆ, ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋರಿದ್ದಾರೆ.

Intro:ಕಲಬುರಗಿ: ಪ್ರತ್ಯೇಕ ಧರ್ಮ ವಿರೋಧಿ ಹೋರಾಟದ ಮುಂಚೂಣಿ ವಹಿಸಿದ್ದ ಸ್ವಾಮಿಗಳನ್ನು ಗೃಹ ಸಚಿವ ಎಮ್.ಬಿ. ಪಾಟೀಲ್ ಭೇಟಿ ಮಾಡಿ ಮತ್ತೊಮ್ಮೆ ಆಶ್ಚರ್ಯ ಹುಟ್ಟಿಸಿದ್ದಾರೆ. ಚಿಂಚೋಳಿ ಪ್ರಚಾರಕ್ಕೆಂದು ಆಗಮಿಸಿದ ಸಚಿವ ಪಾಟೀಲ್ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಗೆ ದಿಢೀರ್ ಭೇಟಿಕೊಟ್ಟರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಘದ ಮುಖಂಡರಾದ ಶ್ರೀಗುರು ಚಿಕ್ಕವೀರೇಂದ್ರ ಸಂಸ್ಥಾನ ಮಠದ ರೇವಣಸಿದ್ಧ ಶಿವಾಚಾರ್ಯರನ್ನು ಸಚಿವರು ಭೇಟಿಯಾದರು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಶ್ರೀಗಳನ್ನು ದೀಢೀರಾಗಿ ಭೇಟಿ ಮಾಡಿ ಪಾಟೀಲ್ ಅಚ್ಚರಿ ಮೂಡಿಸಿದ್ದಾರೆ‌. ಒಂದು ತಾಸಿಗೂ ಹೆಚ್ಚು ಕಾಲ ಶ್ರೀಗಳ ಜೊತೆ ಏಕಾಂಗಿಯಾಗಿ ಚರ್ಚೆ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರ ಕೇವಲ ಒಕ್ಕಲಿಗರ ಸರ್ಕಾರವಾಗಿದೆ. ಇನ್ನೂಳಿದ ಎಲ್ಲರ ಕಡೆಗಣನೆ ನಡೆದಿದೆ. ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಸರ್ಕಾರದ ಬದಲಾವಣೆ ಖಚಿತ, ತಾವೇ ಮುಖ್ಯಮಂತ್ರಿಯಾಗೋ ಸಾಧ್ಯತೆಯಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ
ರೇವಣಸಿದ್ಧ ಶೀವಾಚಾರ್ಯರನ್ನು ಪಾಟೀಲರನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಸಭೆಯ ನಂತರ ಎಂ.ಬಿ.ಪಾಟೀಲರನ್ನು ಮುಂದಿನ ಸಿಎಂ ಎಂದು ಭಕ್ತರ ಮುಂದೆ ಶ್ರೀಗಳು ಹೇಳಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಹ ವೀರಶೈವ ಮಠಾಧೀಶರ ಭೇಟಿ ಮಾಡಿದ್ದಾರೆ. ಸುಲೇಪೇಟೆ ಕಟ್ಟಂಗೇಶ್ವರ ಮಠದಲ್ಲಿ ಕಲಬುರ್ಗಿ, ಬೀದರ್ ವೀರಶೈವ ಮಠಾಧೀಶರನ್ನು ಭೇಟಿಯಾಗಿರೋ ಖಂಡ್ರೆ, ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.ಇದೀಗ ಸಚಿವ ಎಂ.ಬಿ.ಪಾಟೀಲ ಹಾಗೂ ಈಶ್ವರ ಖಂಡ್ರೆ ವೀರಶೈವ ಮಠಾದೀಶರ ಭೇಟಿಯಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.Body:ಕಲಬುರಗಿ: ಪ್ರತ್ಯೇಕ ಧರ್ಮ ವಿರೋಧಿ ಹೋರಾಟದ ಮುಂಚೂಣಿ ವಹಿಸಿದ್ದ ಸ್ವಾಮಿಗಳನ್ನು ಗೃಹ ಸಚಿವ ಎಮ್.ಬಿ. ಪಾಟೀಲ್ ಭೇಟಿ ಮಾಡಿ ಮತ್ತೊಮ್ಮೆ ಆಶ್ಚರ್ಯ ಹುಟ್ಟಿಸಿದ್ದಾರೆ. ಚಿಂಚೋಳಿ ಪ್ರಚಾರಕ್ಕೆಂದು ಆಗಮಿಸಿದ ಸಚಿವ ಪಾಟೀಲ್ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಗೆ ದಿಢೀರ್ ಭೇಟಿಕೊಟ್ಟರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಘದ ಮುಖಂಡರಾದ ಶ್ರೀಗುರು ಚಿಕ್ಕವೀರೇಂದ್ರ ಸಂಸ್ಥಾನ ಮಠದ ರೇವಣಸಿದ್ಧ ಶಿವಾಚಾರ್ಯರನ್ನು ಸಚಿವರು ಭೇಟಿಯಾದರು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಶ್ರೀಗಳನ್ನು ದೀಢೀರಾಗಿ ಭೇಟಿ ಮಾಡಿ ಪಾಟೀಲ್ ಅಚ್ಚರಿ ಮೂಡಿಸಿದ್ದಾರೆ‌. ಒಂದು ತಾಸಿಗೂ ಹೆಚ್ಚು ಕಾಲ ಶ್ರೀಗಳ ಜೊತೆ ಏಕಾಂಗಿಯಾಗಿ ಚರ್ಚೆ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರ ಕೇವಲ ಒಕ್ಕಲಿಗರ ಸರ್ಕಾರವಾಗಿದೆ. ಇನ್ನೂಳಿದ ಎಲ್ಲರ ಕಡೆಗಣನೆ ನಡೆದಿದೆ. ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಸರ್ಕಾರದ ಬದಲಾವಣೆ ಖಚಿತ, ತಾವೇ ಮುಖ್ಯಮಂತ್ರಿಯಾಗೋ ಸಾಧ್ಯತೆಯಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ
ರೇವಣಸಿದ್ಧ ಶೀವಾಚಾರ್ಯರನ್ನು ಪಾಟೀಲರನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಸಭೆಯ ನಂತರ ಎಂ.ಬಿ.ಪಾಟೀಲರನ್ನು ಮುಂದಿನ ಸಿಎಂ ಎಂದು ಭಕ್ತರ ಮುಂದೆ ಶ್ರೀಗಳು ಹೇಳಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಹ ವೀರಶೈವ ಮಠಾಧೀಶರ ಭೇಟಿ ಮಾಡಿದ್ದಾರೆ. ಸುಲೇಪೇಟೆ ಕಟ್ಟಂಗೇಶ್ವರ ಮಠದಲ್ಲಿ ಕಲಬುರ್ಗಿ, ಬೀದರ್ ವೀರಶೈವ ಮಠಾಧೀಶರನ್ನು ಭೇಟಿಯಾಗಿರೋ ಖಂಡ್ರೆ, ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.ಇದೀಗ ಸಚಿವ ಎಂ.ಬಿ.ಪಾಟೀಲ ಹಾಗೂ ಈಶ್ವರ ಖಂಡ್ರೆ ವೀರಶೈವ ಮಠಾದೀಶರ ಭೇಟಿಯಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.