ಕಲಬುರಗಿ: ಮಹಾ ಶಿವರಾತ್ರಿ ಹಿನ್ನೆಲೆ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿರುವ ಸೇಡಂ ತಾಲೂಕಿನ ಯಾನಾಗುಂದಿ ಮಾತೆ ಮಾಣಿಕೇಶ್ವರಿ ಅಮ್ಮನವರು ದರ್ಶನ ನೀಡಿದ್ದಾರೆ.
ಅನಾರೋಗ್ಯದ ಹಿನ್ನೆಲೆ ಮಲಗಿದ ಸ್ಥಿತಿಯಲ್ಲಿಯೇ ಯಾನಾಗುಂದಿ ಮಾಣಿಕ್ಯಗಿರಿಯಲ್ಲಿ ಮಧ್ಯಾಹ್ನ 2.30ರಿಂದ ಕೇವಲ ಹತ್ತು ನಿಮಿಷ ಮಾತ್ರ ಭಕ್ತರಿಗೆ ದರ್ಶನ ನೀಡಿ ಮರಳಿದ್ದಾರೆ.
ಅಮ್ಮನವರ ದರ್ಶನ ಪಡೆಯಲು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಮತ್ತಿತರ ಕಡೆಯಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದರು. ಪ್ರತಿ ಬಾರಿ ದರ್ಶನ ನೀಡಿದಾಗ ಅಮ್ಮನವರು ಆಶೀರ್ವಚನ ನೀಡುತ್ತಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆ ಈ ಬಾರಿ ಮಾತನಾಡದೆ ದರ್ಶನ ಮಾತ್ರ ನೀಡಿದ್ದಾರೆ.
ಮಾಣಿಕೇಶ್ವರಿ ಅಮ್ಮನವರ ಮುಖ ಹಾಗೂ ಪಾದ ಕಂಡು ಕೃತಾರ್ಥರಾದ ಭಕ್ತರು, ಓಂ ನಮಃ ಶಿವಾಯ ಎಂದು ಜೈಕಾರ ಹಾಕಿದರು. ಬೀಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.