ಕಲಬುರಗಿ: ರಸ್ತೆ ದಾಟುತ್ತಿದ್ದ ಪಾದಚಾರಿ ಮೇಲೆ ಸಾರಿಗೆ ಬಸ್ ಹರಿದ ಪರಿಣಾಮ ಸ್ಥಳದಲ್ಲಿಯೇ ಪಾದಚಾರಿ ಸಾವನ್ನಪ್ಪಿರುವ ದಾರುಣ ಘಟನೆ ಶಹಾಬಾದ್ ತಾಲೂಕಿನ ಮಾಲಗತ್ತಿ ಗ್ರಾಮದ ಬಳಿ ಸಂಭವಿಸಿದೆ.
ಮಲಕಪ್ಪ ಎಂಟಮನಿ ಮೃತ ಎಂದು ತಿಳಿದುಬಂದಿದೆ. ಈ ಬಸ್ ಮಾಲಗತ್ತಿ ಬಳಿ ಹೋಗುವಾಗ ಅದೇ ಸಮಯಕ್ಕೆ ರಸ್ತೆ ದಾಟುತ್ತಿದ್ದ ಮಲಕಪ್ಪ ಮೇಲೆ ಹರಿದಿದೆ. ಈ ಹಿನ್ನೆಲೆ ಮಲಕಪ್ಪ ಸ್ಥಳಿದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆಯಿಂದ ಉದ್ರಿಕ್ತಗೊಂಡ ಸ್ಥಳಿಯರು ಬಸ್ ಮೇಲೆ ಕಲ್ಲು ತೂರಾಟ ಮಾಡಿ, ಚಾಲಕನನ್ನು ಹಿಡಿದು ಥಳಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಚಾಲಕನನ್ನು ರಕ್ಷಿಸಿ ಠಾಣೆಗೆ ಕೊರೆದೊಯ್ದರು. ಘಟನೆ ಸಂಬಂಧ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.