ETV Bharat / state

ನನ್ನ ಮುಂದೆ ನೀನಿನ್ನೂ ಬಚ್ಚಾ... ಪ್ರಿಯಾಂಕ್​ ಖರ್ಗೆ ವಿರುದ್ಧ ಗುತ್ತೇದಾರ್ ವಾಗ್ದಾಳಿ - ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್

ನನಗೆ ವಾರ್ನ್ ಮಾಡಲು ಮಾಲೀಕಯ್ಯ ಯಾರು ಎಂದಿದ್ದ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಕುರಿತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಪ್ರತಿಕ್ರಿಯೆ ನೀಡಿದ್ದಾರೆ.

kalburagi
ಮಾಲೀಕಯ್ಯ ಗುತ್ತೇದಾರ್
author img

By

Published : Nov 19, 2020, 7:50 PM IST

ಕಲಬುರಗಿ: ಪ್ರಿಯಾಂಕ್ ನೀನೇನು ಹುಲಿನಾ, ಮಾಲೀಕಯ್ಯಾ ಗುತ್ತೇದಾರ ಮುಂದೆ ನೀನು ಇನ್ನೂ ಬಚ್ಚಾ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರನ್ನು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಏಕವಚನದಲ್ಲೇ ಕಿಚಾಯಿಸಿದ್ದಾರೆ.

ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್

ತಾಕತ್ತಿದ್ದರೆ ಬಿಜೆಪಿ ಹೈಕಮಾಂಡ್​ಗೆ ವಾರ್ನ್ ಮಾಡಲಿ ನನಗೆ ವಾರ್ನ್ ಮಾಡಲು ಮಾಲೀಕಯ್ಯ ಯಾರು ಎಂದಿದ್ದ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಗುತ್ತೆದಾರ್, ನನ್ನ ಮುಂದೆ ಪ್ರಿಯಾಂಕ್ ಖರ್ಗೆ ಬಚ್ಚಾ. ನಾನು ಬೆಟ್ಟಿಂಗ್ ವಿಷಯದಲ್ಲಿ ಮತ್ತಿಮೋಡ್ ಮಾವನಿಗೆ ಸಮರ್ಥನೆ ಮಾಡಿಕೊಂಡಿಲ್ಲ.‌ ಎಫ್​ಐಆರ್​ ನಲ್ಲಿ ಹೆಸರಿಲ್ಲದಿದ್ದರೂ ಕಾರು ಸೀಜ್ ಮಾಡಿದ್ಯಾಕೆ ಅಂತ ಕೇಳಿದ್ದೇನೆ. ದಾಖಲೆಗಳಿದ್ದರೆ ಇಲ್ಲಿಯೇ ಕೊಡಬಹುದಿತ್ತು. ಬಿಜೆಪಿ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ತಿತ್ತು. ಅದನ್ನು ಬಿಟ್ಟು ಮಹಾರಾಷ್ಟ್ರ ಪೊಲೀಸರನ್ನು ಕರೆತರೋ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ, ನಾವು ಒಂದು ಕುಟುಂಬದ ಸದಸ್ಯರಂತಿದ್ದೆವು. ಇದರಲ್ಲಿ ಹುಳಿ ಹಿಂಡಿದವರೇ ಪ್ರಿಯಾಂಕ್ ಖರ್ಗೆ. ಜಿಲ್ಲಾ ಮಂತ್ರಿಯಾಗಿದ್ದಾಗ ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಿದ್ರು. ಅದೇ ಕಾರಣಕ್ಕೆ ಕಾಂಗ್ರೆಸ್ ಬಿಟ್ಟು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಬೇಕಾಯಿತು. ನಿನ್ನ ದುರಹಂಕಾರದಿಂದಲೇ ರಾಷ್ಟ್ರ ಕಂಡ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಬೇಕಾಯಿತು. ಈಗಲೂ ಕಾಲ ಮಿಂಚಿಲ್ಲ ದಾಖಲೆಗಳಿದ್ದರೆ ತೋರಿಸಿ. ಬಹಿರಂಗ ಚರ್ಚೆಗೆ ನಾನು ಸಿದ್ಧ. ನನ್ನನ್ನು ಕೆಣಕಿದ್ರೆ ಸುಮ್ಮನಿರೋಲ್ಲ ಅಂತೀಯಾ‌, ನೀನೇನು ದೊಡ್ಡ ಹುಲಿನಾ ಎಂದು ಪ್ರಿಯಾಂಕ್ ಖರ್ಗೆಗೆ ಏಕ ವಚನದಲ್ಲಿ ಪ್ರಶ್ನಿಸಿದ್ದಾರೆ.

ರಾಜಕೀಯವಾಗಿ ಬೆಳೆಯೋ ಹುಡುಗನಿಗೆ ಇಷ್ಟು ದುರಹಂಕಾರ ಸರಿಯಲ್ಲ. ನಾವ್ಯಾರೂ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡಿಲ್ಲ. ಆದ್ರೆ ನಿಮ್ಮ ಬಾಡಿಗಾರ್ಡ್ ಖಾನ್ ಏನು ಮಾಡ್ತಾನೆ ಅನ್ನೋದನ್ನು ಮೊದಲು ತಿಳಿದುಕೋ. ಗಂಭೀರತೆ ಬೆಳೆಸಿಕೊಂಡು ಹಿರಿಯರಿಗೆ ಗೌರವ ಕೊಡೋದನ್ನು ಕಲಿ. ಸದ್ಯ ನಾನು ಇವಾಗ ಆಸ್ಪತ್ರೆಯಲ್ಲಿರುವೆ. ವಾಪಸ್​ ಬಂದ ಬಳಿಕ ಬಹಿರಂಗ ಚರ್ಚೆ ಮಾಡೋಣ ಎಂದು ಪ್ರಿಯಾಂಕ್ ಖರ್ಗೆಗೆ ಗುತ್ತೆದಾರ್ ತಾಕೀತು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.