ETV Bharat / state

ಹಿಂದೂ ಮುಸ್ಲಿಂ ಭಾವೈಕ್ಯತೆಯ ತಾಣ ಲಾಡ್ಲಾಪೂರ ಹಾಜಿಸರ್ವರ್ ದೇವರ ಹುಂಡಿಗೆ ಕನ್ನ - ಕಲಬುರಗಿ ಇತ್ತೀಚಿನ ಸುದ್ದಿ

ಹಿಂದೂ ಮುಸ್ಲಿಂ ಭಾವೈಕ್ಯತೆ ತಾಣವಾದ ಹಾಜಿಸರ್ವರ್ ದೇವರ ಹುಂಡಿಗೆ ಖದೀಮರು ಕನ್ನ ಹಾಕಿ ಸುಮಾರು 5 ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳತನ ಮಾಡಿದ್ದಾರೆ.

ladlapura
ಲಾಡ್ಲಾಪೂರ ಹಾಜಿಸರ್ವರ್ ದೇವರ ಹುಂಡಿ
author img

By

Published : Jul 21, 2021, 11:05 AM IST

ಕಲಬುರಗಿ: ಚಿತ್ತಾಪುರ ತಾಲೂಕು ಲಾಡ್ಲಾಪುರ ಗ್ರಾಮದ ಪ್ರಸಿದ್ಧ ಹಿಂದೂ ಮುಸ್ಲಿಂ ಭಾವೈಕ್ಯತೆ ತಾಣವಾದ ಹಾಜಿಸರ್ವರ್ ದೇವರ ಹುಂಡಿಗೆ ಖದೀಮರು ಕನ್ನ ಹಾಕಿದ್ದಾರೆ.

ದೇವಸ್ಥಾನ ಆವರಣದಲ್ಲಿರುವ ಹುಂಡಿ ಒಡೆದು ಹಣ ಲಪಟಾಯಿಸಿದ್ದಾರೆ‌. ಕಳೆದ ಒಂದು ವರ್ಷದಿಂದ ಹುಂಡಿಯಲ್ಲಿ ಜಮಾ ಆಗಿದ್ದ ಸುಮಾರು 5 ಲಕ್ಷಕ್ಕೂ ಅಧಿಕ ಹಣ ರಾತ್ರೋರಾತ್ರಿ ಎಗರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ‌.

ಕೆಲ ಚಿಲ್ಲರೆ ನಾಣ್ಯಗಳು ಹಾಗೆ ಬಿಟ್ಟಿದ್ದು, ದೇವಸ್ಥಾನದ ಹೊರವಲಯದಲ್ಲಿಯೂ ಚಿಲ್ಲರೆ ಹಣ ಬಿಸಾಡಿ ಹೋಗಿದ್ದಾರೆ. ಸ್ಥಳಕ್ಕೆ ವಾಡಿ ಪಿಎಸ್ಐ ವಿಜಯಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.