ETV Bharat / state

ಖರ್ಗೆ ಎಸ್ಕಾರ್ಟ್​​ಗಾಗಿ ಕೊಲೆ ಬೆದರಿಕೆ ಆರೋಪ ಮಾಡಿರಬಹುದು.. ಮಾಲೀಕಯ್ಯ ಗುತ್ತೇದಾರ್‌ ವ್ಯಂಗ್ಯ

ಖರ್ಗೆಯಂತಹ ನಾಯಕರಿಗೆ ಜೀವ ಬೆದರಿಕೆ ಹಾಕುವವರು ಇದ್ದಾರೆ ಎಂದರೆ ನನಗೆ ನಂಬಲಾಗುತ್ತಿಲ್ಲ. ಇದ್ದರೂ ಅದರ ಬಗ್ಗೆ ತನಿಖೆಯಾಗಲಿ, ಅಂತವರ ವಿರುದ್ಧ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲಿ.

author img

By

Published : Jun 10, 2020, 8:50 PM IST

Kharghe may have been charged with murder threat for escort
ಖರ್ಗೆ ಎಸ್ಕಾರ್ಟ್​​ಗಾಗಿ ಕೊಲೆ ಬೆದರಿಕೆ ಆರೋಪ ಮಾಡಿರಬಹುದು : ಮಾಲೀಕಯ್ಯ ವ್ಯಂಗ್ಯ

ಸೇಡಂ : ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಎಸ್ಕಾರ್ಟ್​​ನಲ್ಲಿ ಓಡಾಡಿದ್ದ ಡಾ.ಮಲ್ಲಿಕಾರ್ಜುನ ಖರ್ಗೆಗೆ ಈಗ ಒಂದೇ ಗಾಡಿಯಲ್ಲಿ ಅಡ್ಡಾಡುತ್ತಿರುವುದರಿಂದ ಮುಜುಗರವಾಗಿರಬಹುದು. ಅದಕ್ಕೆ ಕೊಲೆ ಬೆದರಿಕೆ ಅಸ್ತ್ರ ಪ್ರಯೋಗಿಸುತ್ತಿರಬಹುದು ಎಂದು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ವ್ಯಂಗ್ಯವಾಡಿದ್ದಾರೆ.

ಪಟ್ಟಣದಲ್ಲಿ ನಡೆದ ಬಿಜೆಪಿಯ ಕಲಬುರ್ಗಿ ವಿಭಾಗದ ಪ್ರಮುಖರ ಸಭೆಗೆ ಆಗಮಿಸಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಬಂದಿದೆ ಅಂದರೆ ನಂಬಲಾಗುತ್ತಿಲ್ಲ. ಯಾವ ಉದ್ದೇಶಕ್ಕಾಗಿ ದೂರು ನೀಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಎಸ್ಕಾರ್ಟ್‌ ಮತ್ತು ಭದ್ರತೆ ಹೆಚ್ಚಿಸಿಕೊಳ್ಳಲು ಈ ರೀತಿಯ ದೂರು ನೀಡಿರಬಹುದು ಎಂಬ ಸಂಶಯ ಕಾಡುತ್ತಿದೆ.

ಈ ಹಿಂದೆ ಭದ್ರತೆಯಲ್ಲೇ ಅಡ್ಡಾಡ್ಡಿದ್ದಾರೆ, ಈಗ ಅಭದ್ರತೆ ಕಾಡುತ್ತಿರಬಹುದು. ಈಗ ರಾಜ್ಯಸಭಾ ಸದಸ್ಯರಾಗುತ್ತಿದ್ದಾರೆ. ಒಬ್ಬರೇ ಅಡ್ಡಾಡಲು ಮುಜುಗರವಾಗುತ್ತಿದೆಯೋ ಏನೋ? ಎಂದರು. ಖರ್ಗೆಯಂತಹ ನಾಯಕರಿಗೆ ಜೀವ ಬೆದರಿಕೆ ಹಾಕುವವರು ಇದ್ದಾರೆ ಎಂದರೆ ನನಗೆ ನಂಬಲಾಗುತ್ತಿಲ್ಲ. ಇದ್ದರೂ ಅದರ ಬಗ್ಗೆ ತನಿಖೆಯಾಗಲಿ, ಅಂತವರ ವಿರುದ್ಧ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.