ಕಲಬುರಗಿ : ಹೊಲಿಗೆ ಯಂತ್ರ ಮಂಜೂರು ಮಾಡಲು ಜೇವರ್ಗಿ ಮಿನಿ ವಿಧಾನಸೌದದಲ್ಲಿ ಲಂಚ ಪಡೆಯುತ್ತಿದ್ದ ಪಿಡಿಒ ಎಸಿಬಿ ಬಲಿಗೆ ಬಿದ್ದಿದ್ದಾರೆ.
ಜೇವರ್ಗಿ ತಾಲೂಕಿನ ಕೆಲ್ಲೂರ್ ಗ್ರಾಮ ಪಂಚಾಯತ್ ಪ್ರಬಾರಿ ಪಿಡಿಒ ಗಂಗಾಧರ ಮಾಡಗಿ ಎಸಿಬಿ ಬಲೆಗೆ ಬಿದ್ದವರು. ಇವರು ಹೊಲಿಗೆ ಯಂತ್ರ ಮಂಜೂರು ಮಾಡಲು ವಿಕಲಚೇತನ ಸುಭಾಷ್ ಅನ್ನೋರಿಗೆ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇವತ್ತು ಎರಡು ಸಾವಿರ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.