ಕಲಬುರಗಿ: ಕೋವಿಡ್ ಭೀತಿಯಿಂದ ಹೊರಬರಲಾಗದೆ, ಮಾರುಕಟ್ಟೆಗೆ ತೆರಳಲು ಸಮಸ್ಯೆ ಎದುರಿಸುತ್ತಿರುವವರಿಗಾಗಿ ಜಿಲ್ಲೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಮಾರ್ಕೆಟಿಂಗ್ ಆ್ಯಪ್ ಲಾಂಚ್ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಆ್ಯಪ್ ಮುಖ್ಯಸ್ಥ ಅಮರೇಶ ಬಾಳೆ, ಜಿಲ್ಲೆಯ ಜನತೆಗೆ ಉಪಯುಕ್ತವಾಗುವ ನಿಟ್ಟಿನಲ್ಲಿ, ಕೊರೊನಾ ಆತಂಕದಿಂದ ಹೂರಬರಲಾಗದೆ ಸಮಸ್ಯೆ ಎದುರಿಸುತ್ತಿರುವವರಿಗೆ ಹಾಗೂ ಕೆಲಸದ ಒತ್ತಡದಲ್ಲಿರುವವರಿಗೆ ಮಾರ್ಕೆಟಿಂಗ್ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಇ-ಕಮರ್ಶಿಯಲ್ ಅಪ್ಲಿಕೇಶನ್ (ಯು ಆರ್ ಕಾರ್ಟ್) ಎಂಬ ವಿನೂತನ ಮಾರ್ಕೆಟಿಂಗ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್ನಿಂದಾಗಿ ಪ್ರತಿನಿತ್ಯದ ದಿನಬಳಕೆ ವಸ್ತುಗಳು, ದಿನಸಿ, ಬೇಕರಿ ಸಾಮಾನು, ಪೂಜಾ ಸಾಮಗ್ರಿ, ತರಕಾರಿ ಮತ್ತು ಹಣ್ಣುಗಳನ್ನು ಗ್ರಾಹಕರ ಮನೆಗೆ ಅತಿ ವೇಗದಲ್ಲಿ ತಲುಪಿಸಲಾಗುವುದು ಎಂದು ತಿಳಿಸಿದರು.
ವ್ಯಾಪಾರಿಗಳಿಗೆ ಲಾಭದಾಯಕ:
ಯು ಆರ್ ಕಾಟ್೯ ಆ್ಯಪ್ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಸೇವೆ ನೀಡುತ್ತದೆ. ವ್ಯಾಪಾರಿಗಳ ಜೊತೆ ಕೈಜೋಡಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ನಾವು ಇಚ್ಛಿಸಿದ್ದೇವೆ. ಇದರಿಂದ ವ್ಯಾಪಾರಗಳಿಗೂ ಉತ್ತಮ ಲಾಭವಾಗಲಿದೆ ಎಂದು ಅಮರೇಶ ತಿಳಿಸಿದ್ದಾರೆ.