ಕಲಬುರಗಿ: ಗಣೇಶ ಚತುರ್ಥಿಗಾಗಿ ಜಿಲ್ಲೆ ಸಿದ್ದಗೊಂಡಿದೆ. ನಾಳೆ ಗಣೇಶ ಚತುರ್ಥಿ ಆರಂಭಗೊಳ್ಳಲಿದ್ದು, ಇದಕ್ಕಾಗಿ ಹೂವು ಹಣ್ಣು, ಬಾಳೆ ದಿಂಡು, ಕಬ್ಬು, ಮಾವಿನ ತಳಿಲು ತೋರಣ ಖರೀದಿಯಲ್ಲಿ ಜನ ಫುಲ್ ಬ್ಯುಸಿ ಆಗಿದ್ದರು.
ನಗರದ ಸೂಪರ್ ಮಾರ್ಕೇಟ್, ರಾಮ ಮಂದಿರ ಸರ್ಕಲ್, ಕಣ್ಣಿ ಮಾರುಕಟ್ಟೆಯಲ್ಲಿ ಹೂವು ಹಣ್ಣು ಮಾರಾಟ ಜೋರಾಗಿತ್ತು. ಹಬ್ಬದ ನಿಮಿತ್ತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜೇಬಿಗೆ ಬಿಸಿ ಮುಟ್ಟಿದರೂ ಲಂಬೋದರನ ಬರುವಿಕೆಗಾಗಿ ಜನರು ಹೂ ಹಣ್ಣು ಖರೀದಿಸಿದರು.
ಇನ್ನು ವಿಘ್ನವಿನಾಶಕನ ವಿಗ್ರಹಗಳ ಖರೀದಿ, ಡೆಕೋರೇಶನ್ ವಸ್ತುಗಳ ಮಾರಾಟದ ಭರಾಟೆ ಕೂಡಾ ಭರ್ಜರಿಯಾಗಿತ್ತು.