ETV Bharat / state

ವೀಕೆಂಡ್​ ಕರ್ಫ್ಯೂ ಮಧ್ಯೆ ರಸ್ತೆಗಿಳಿದ ಪುಂಡರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ - ಕೊರೊನಅ ನಿಯಮ

ರಸ್ತೆ ಮೇಲೆ ಅನವಶ್ಯಕವಾಗಿ ಸುತ್ತಾಡದಂತೆ ಸಾಕಷ್ಟು ಜಾಗೃತಿ ಮೂಡಿಸಿದರು ಸಹ ಜನ ಪೊಲೀಸರ ಮಾತಿಗೆ ಬೆಲೆ ಕೊಡದೆ ಬೇಕಾಬಿಟ್ಟಿ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ. ಇದು ಪೊಲೀಸರಿಗೆ ತೆಲೆನೋವಾಗಿದೆ..

kalburgi-police-did-squat-for-those-who-violated-curfew-rules-in-city
ವೀಕೆಂಡ್​ ಕರ್ಫ್ಯೂ ಮಧ್ಯೆ ರಸ್ತೆಗಿಳಿದ ಪುಂಡರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ
author img

By

Published : Apr 25, 2021, 4:01 PM IST

ಕಲಬುರಗಿ : ವೀಕೆಂಡ್​​ ಕರ್ಫ್ಯೂ ಜಾರಿಗೊಳಿಸಿದರೂ ಸಹ ಅನಗತ್ಯವಾಗಿ ರಸ್ತೆ ಮೇಲೆ ಓಡಾಡುತ್ತಿದ್ದ ಮಂದಿಗೆ ಪೊಲೀಸರು ಬಸ್ಕಿ ಹೊಡೆಸಿ, ತಿಳಿ ಹೇಳಿ ಕಳುಹಿಸಿದ್ದಾರೆ. ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರ ಬಂದವರಿಗೆ ಪೊಲೀಸರು ತಡೆದು ಬಸ್ಕಿ ಶಿಕ್ಷೆ ನೀಡಿದ್ದಾರೆ.

ವೀಕೆಂಡ್​ ಕರ್ಫ್ಯೂ ಮಧ್ಯೆ ರಸ್ತೆಗಿಳಿದ ಪುಂಡರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ..

ಕೋವಿಡ್ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ರಾಜ್ಯ ಸರ್ಕಾರ ಕಠಿಣ ಕ್ರಮ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಕೊರೊನಾ ಸರಪಳಿ ತಡೆಯಲು ಪೊಲೀಸರು, ಆರೋಗ್ಯ ಸಿಬ್ಬಂದಿ, ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಕೆಲವರು ಕೋವಿಡ್ ನಿಯಮವನ್ನು ಗಾಳಿಗೆತೂರಿ ಮನೆಯಿಂದ ಹೊರ ಬಂದು ಅಲೆದಾಡುತ್ತಿರುವುದು ಗಮನಕ್ಕೆ ಬಂದಿತ್ತು. ಇದನ್ನು ತಡೆಯುವ ನಿಟ್ಟಿನಲ್ಲಿ ಕಲಬುರಗಿ ಪೊಲೀಸರು ದೈಹಿಕ ಅಂತರ ಕಾಪಾಡಿ ಅನೇಕರಿಂದ ಬಸ್ಕಿ ಹೊಡೆಸಿದರು‌.

ರಸ್ತೆ ಮೇಲೆ ಅನವಶ್ಯಕವಾಗಿ ಸುತ್ತಾಡದಂತೆ ಸಾಕಷ್ಟು ಜಾಗೃತಿ ಮೂಡಿಸಿದರು ಸಹ ಜನ ಪೊಲೀಸರ ಮಾತಿಗೆ ಬೆಲೆ ಕೊಡದೆ ಬೇಕಾಬಿಟ್ಟಿ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ. ಇದು ಪೊಲೀಸರಿಗೆ ತೆಲೆನೋವಾಗಿದೆ.

ಇದನ್ನೂ ಓದಿ: ಆ್ಯಂಬುಲೆನ್ಸ್​ ಅವ್ಯವಸ್ಥೆ.. ಕುಟುಂಬ ಸದಸ್ಯನ ಶವ ತೋರಿಸಿ ಡಿಸಿಎಂಗೆ ಮಹಿಳೆಯಿಂದ ತರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.