ETV Bharat / state

ಕಲಬುರಗಿ ಜನರ ನಿರೀಕ್ಷೆಗೆ ತಕ್ಕಂತೆ ಬಜೆಟ್ ಲಾಭ ದೊರೆತಿಲ್ಲ: ಲಕ್ಷ್ಮಣ್ ದಸ್ತಿ ಅಸಮಾಧಾನ - ಬಜೆಟ್ 2021

ಈ ಬಾರಿಯ ಬಜೆಟ್‌ನಲ್ಲಿಯೂ ಸಹ ಮತ್ತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಮಾಧಾನಕರ ಭಾಗ ಸಿಕ್ಕಿಲ್ಲ. ವಿಭಾಗೀಯ ಕೇಂದ್ರವಾದ ಕಲಬುರಗಿಗೆ ಯಾವುದೇ ಯೋಜನೆ ಘೋಷಣೆ ಮಾಡದಿರುವುದು ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.

kalburgi people unsatisfied with  2021 budget
ಬಜೆಟ್ ಬಗ್ಗೆ ಪ್ರತಿಕ್ರಿಯೆ
author img

By

Published : Mar 9, 2021, 9:29 AM IST

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1,500 ಕೋಟಿ ಘೋಷಣೆ ಹೊರತು ಪಡಿಸಿದರೆ ಈ ಭಾಗದ ಜನರ ನಿರೀಕ್ಷೆಗೆ ತಕ್ಕಂತೆ ಬಜೆಟ್ ಲಾಭ ದೊರೆತಿಲ್ಲ.

371 ಜೆ ತಿದ್ದುಪಡಿ ಹಿನ್ನೆಲೆ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ, ಏಮ್ಸ್ ಸ್ಥಾಪಿಸುವ ಬಗ್ಗೆ ಕೇಂದ್ರಕ್ಕೆ ಶಿಫಾರಸು, ರೈಲ್ವೆ ಯೋಜನೆಗಳು ಸೇರಿದಂತೆ ಹತ್ತು ಹಲವು ಯೋಜನೆಗಳ ಬಗ್ಗೆ ಈ ಬಾರಿ ಬಜೆಟ್​ನಲ್ಲಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಲಿದ್ದಾರೆ ಎಂಬ ಬೆಟ್ಟದಷ್ಟು ನೀರಿಕ್ಷೆಯಲ್ಲಿದ್ದ ಇಲ್ಲಿನ ಜನರ ನಿರೀಕ್ಷೆ ಹುಸಿಯಾಗಿದೆ.

ಕಲಬುರಗಿ ಜಿಲ್ಲೆ ಫಿರೋಜಾಬಾದ್‌ನಲ್ಲಿ 500 ಮೆಗಾ ವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಪಾರ್ಕ್, ಯಾದಗಿರಿ ಜಿಲ್ಲೆಯ ಕಡೂರಿನಲ್ಲಿ ಬಲ್ಕ್ ಡ್ರಗ್ ಪಾರ್ಕ್, ಕೊಪ್ಪಳ ಜಿಲ್ಲೆ ಸಿರವಾರದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್, ಕಲಬುರ್ಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ವಿಭಾಗ ಸ್ಥಾಪನೆ ಸೇರಿದಂತೆ ಒಂದೆರಡು ಚಿಕ್ಕಪುಟ್ಟ ಯೋಜನೆ ಹಾಗೂ ಎರಡು ದೊಡ್ಡ ಯೋಜನೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ದೊರಕಿದೆ. ಕೊರೊನಾದಂತ ಸಂದಿಗ್ಧ ಸ್ಥಿತಿಯಲ್ಲಿಯೂ ಕೆಲವು ಯೋಜನೆ ನೀಡಿದ್ದು, ಒಂದಿಷ್ಟು ಸಮಾಧಾನ ತರಿಸಿದರೆ ವಿಭಾಗೀಯ ಕೇಂದ್ರವಾದ ಕಲಬುರಗಿಗೆ ಯಾವುದೇ ಯೋಜನೆ ಘೋಷಣೆ ಮಾಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಬಜೆಟ್ ಬಗ್ಗೆ ಅಸಮಾಧಾನ
ಹಿರಿಯ ಹೋರಾಟಗಾರ ಲಕ್ಷ್ಮಣ್ ದಸ್ತಿ ಅಭಿಪ್ರಾಯ: ಈ ಬಾರಿಯ ಬಜೆಟ್ ತೃಪ್ತಿದಾಯಕ ಬಜೆಟ್ ಅಲ್ಲ, ಈ ಬಾರಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅದರಲ್ಲೂ ವಿಭಾಗೀಯ ಸ್ಥಾನವಾದ ಕಲಬುರಗಿಗೆ ಹೆಚ್ಚಿನ ಆದ್ಯತೆ ನೀಡುವರೆಂಬ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಈ ಬಾರಿಯ ಬಜೆಟ್‌ನಲ್ಲಿಯೂ ಸಹ ಮತ್ತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಮಾಧಾನಕರ ಭಾಗ ಸಿಕ್ಕಿಲ್ಲ, ಕಲಬುರಗಿಯಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಿಲ್ಲ.
ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಲಾಗಿದ್ದ ಕಲಬುರಗಿ ಸೆಕೆಂಡ್ ರಿಂಗ್ ರೋಡಿಗೆ ಅನುದಾನ ಸಹ ಮೀಸಲಿಟ್ಟಿಲ್ಲ. ನನೆಗುದಿಗೆ ಬಿದ್ದಿರುವ ಮಧ್ಯಮ ಹಾಗೂ ಬೃಹತ್ ನೀರಾವರಿ ಬಗ್ಗೆ ಹೆಚ್ಚಿನ ಆದ್ಯತೆ ನೀಡಿಲ್ಲ. ಹೆದ್ದಾರಿ ಜೋಡಣೆ ಬಗ್ಗೆ ಯಾವುದೇ ಚಕಾರವೆತ್ತಿಲ್ಲ, ವಿಶೇಷವಾಗಿ ಕಲಬುರಗಿ ಜಿಲ್ಲೆಯಿಂದ ರಾಜ್ಯದ ಅನ್ಯಭಾಗಕ್ಕೆ ಸ್ಥಳಾಂತರವಾಗುತ್ತಿರುವ ವಿಭಾಗೀಯ ಕಚೇರಿಗಳನ್ನು ಮರಳಿ ಕಲಬುರಗಿಗೆ ತರುವುದು ಹಾಗೂ ಸ್ಥಳಾಂತರ ಕಾರ್ಯ ಕೈಬಿಡುವ ಬಗ್ಗೆ ಬಜೆಟ್​​ನಲ್ಲಿ ಯಾವುದೇ ಮಾತನಾಡದ ಸಿಎಂ ಬಿಎಸ್​ವೈ ಬಜೆಟ್ ನಿರಾಶಾದಾಯಕ ಬಜೆಟ್ ಆಗಿದೆ ಅನ್ನೋದು ಹೋರಾಟಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ‌‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.