ಕಲಬುರಗಿ : ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ನೋಟಿಸ್ ಜಾರಿ ಮಾಡುವ ಮೂಲಕ ಚಾಟಿ ಬೀಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಇನ್ನೂ ಸಹ ಸಾವಿರಾರು ಎಕ್ಕರೆ ಕಬ್ಬು ಕಟಾವ್ ಆಗದೆ ಉಳಿದಿರುವ ಹಿನ್ನೆಲೆ ಕಬ್ಬುಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಹಲವು ದೂರು ಬಂದ ಕಾರಣ ಡಿಸಿ ನೋಟಿಸ್ ನೀಡುವ ಮೂಲಕ ಸಕ್ಕರೆ ಕಾರ್ಖಾನೆಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿ ನೋಟಿಸ್ನಿಂದ ಎಚ್ಚೆತ್ತುಕೊಂಡ ಆಳಂದ ಎನ್‌ಎಸ್‌ಐಎಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ಕಬ್ಬು ಕಟಾವಿನ ಬಗ್ಗೆ ಮಾಹಿತಿ ನೀಡಿದೆ. ಯಾವ ದಿನಾಂಕದಂದು ಯಾವ ಗ್ರಾಮದಲ್ಲಿ ರೈತರ ಕಬ್ಬು ಕಟಾವ್ ಮಾಡಲಾಗುವುದು ಎಂದು ವಿವರಣೆ ನೀಡಿದೆ.
ಜಿಲ್ಲೆಯ ಉಳಿದ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೂ ಕೂಡ ಇದೇ ಪದ್ಧತಿ ಅನುಸರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಅಷ್ಟೇ ಅಲ್ಲ, ಕಬ್ಬು ಕಟಾವಿನ ಕುರಿತು ರೈತರು ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಮಾಹಿತಿ ನೀಡಲು ಆ್ಯಪ್ ಹಾಗೂ ಸಹಾಯವಾಣಿ ಸ್ಥಾಪನೆಗೆ ಮುಂದಾಗಿದೆ.
ಇದನ್ನೂ ಓದಿ: ಸಿಎಂ ನಿವಾಸದ ಮುಂದೆ ಹೈಡ್ರಾಮಾ: ಪೊಲೀಸರಿಂದ ವಂಚನೆಯಾಗಿದೆ ಎಂದು ವಿಷ ಕುಡಿಯಲು ಯತ್ನಿಸಿದ ವೃದ್ಧ