ಕಲಬುರಗಿ: ಕೋವಿಡ್ ಎರಡನೇ ಅಲೆ ಹರಡುವಿಕೆ ತಡೆಗೆ ಕೊರೊನಾ ಕರ್ಫ್ಯೂ ಜಾರಿಯಲ್ಲಿದೆ. ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.
ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಮಾಡಿಕೊಟ್ಟರು. ಆದ್ರೆ ಇಲ್ಲ ಸಲ್ಲದ ನೆಪವೊಡ್ಡಿ 10 ಗಂಟೆಯ ನಂತರವೂ ಜನರು ರಸ್ತೆ ಮೇಲೆ ಓಡಾಡುವುದು ಕಂಡುಬಂದಿತು. ಪಡ್ಡೆ ಹುಡುಗರು ಸೇರಿದಂತೆ ಸುಖಾಸುಮ್ಮನೆ ಹೊರಗಡೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಇದನ್ನು ಓದಿ: ನಿನ್ನೆ ರಾತ್ರಿ ಯಾದಗಿರಿ ಕೋವಿಡ್ ಆಸ್ಪತ್ರೆಯಲ್ಲಿ ಕರೆಂಟ್ ಕಟ್.. ಆಮೇಲೆ ಹೀಗಾಯ್ತು..
ಪೊಲೀಸರು ಎಷ್ಟೇ ಹೇಳಿದರೂ ಅವರ ಮಾತು ಕೇಳದ ಹಿನ್ನೆಲೆ ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.