ETV Bharat / state

ಇಂದು ಕಲಬುರಗಿ ಪಾಲಿಕೆ ಮೇಯರ್ ಚುನಾವಣೆ; ಗದ್ದುಗೆ ಹಿಡಿಯಲು ಕೈ-ಕಮಲ ಪೈಪೋಟಿ - Etv Bharat Kannada

ಒಂದು ವರ್ಷದ ಬಳಿಕ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್,​ ಉಪಮೇಯರ್​ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಲಬುರಗಿ ಮಹಾನಗರ ಪಾಲಿಕೆ ಚುನಾವಣೆ
ಲಬುರಗಿ ಮಹಾನಗರ ಪಾಲಿಕೆ ಚುನಾವಣೆ
author img

By

Published : Mar 23, 2023, 8:22 AM IST

ಕಲಬುರಗಿ: ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಿರುವ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಗಳಿಗೆ ಇಂದು(ಗುರುವಾರ) ಎಲೆಕ್ಷನ್ ನಡೆಯಲಿದೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಕಾರಣ ಮೇಯರ್ ಗಾದಿಯೇರಲು ಕಾಂಗ್ರೆಸ್, ಬಿಜೆಪಿ ಕಸರತ್ತು ನಡೆಸುತ್ತಿವೆ. ಇತ್ತ ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ನಡೆ ನಿಗೂಢವಾಗಿದ್ದು, ಮೆಜಾರಿಟಿ ಪ್ರೂವ್ ಮಾಡಿ ಪಾಲಿಕೆಯ ಚುಕ್ಕಾಣಿ ಹಿಡಿಯಲು ಕೈ, ಕಮಲ ವಾಳಯದಲ್ಲಿ ಗೇಮ್ ಪ್ಲ್ಯಾನ್‌ ಜೋರಾಗಿದೆ.

55 ಸದಸ್ಯ ಬಲದ ಪಾಲಿಕೆಗೆ ಚುನಾವಣೆ ನಡೆದು ಒಂದೂವರೆ ವರ್ಷದ ಬಳಿಕ ಇದೀಗ ನಗರದ ಟೌನ್ ಹಾಲ್​ನಲ್ಲಿ ಮೇಯರ್, ಉಪಮೇಯರ್ ಎಲೆಕ್ಷನ್ ನಡೆಯಲಿದೆ. ಯಾವುದೇ ಪಕ್ಷಕ್ಕೂ ಇಲ್ಲಿನ ಜನತೆ ಸ್ಪಷ್ಟ ಬಹುಮತ ನೀಡದ ಕಾರಣ ಮೇಯರ್ ಹುದ್ದೆಗೇರಲು ಕಾಂಗ್ರೆಸ್, ಬಿಜೆಪಿ ರಣತಂತ್ರ ರೂಪಿಸುತ್ತಿವೆ. 55 ಪಾಲಿಕೆ ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿ ಒಟ್ಟು 70 ಜನ ಮತದಾನದ ಹಕ್ಕು ಹೊಂದಿದ್ದಾರೆ. ಆದರೆ, ಬಿಜೆಪಿಯಿಂದ ಗೆದ್ದಿದ್ದ ಪ್ರಿಯಾಂಕಾ ಭೋಯಿ ಅವರನ್ನು ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ನ್ಯಾಯಾಲಯ ಅನರ್ಹಗೊಳಿಸಿದೆ. ಬಾಬುರಾವ್ ಚಿಂಚನಸೂರ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅವರ ಮತವೂ ಬಿಜೆಪಿಗೆ ಇಲ್ಲವಾಗಿದೆ. ಹೀಗಾಗಿ 68 ಜನರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಪಾಲಿಕೆ ಗದ್ದುಗೆ ಹಿಡಿಯಲು 35 ಸದಸ್ಯರ ಬಲ ಬೇಕು.

ಕಾಂಗ್ರೆಸ್‌ನ 27 ಪಾಲಿಕೆ ಸದಸ್ಯರು, 1 ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಸದಸ್ಯರು, 1 ಖನೀಜ್ ಫಾತೀಮಾ ಶಾಸಕಿ ಮತ್ತು 1 ಚಂದ್ರಶೇಖರ್ ಪಾಟೀಲ್ ಹುಮನಾಬಾದ್ ಚುನಾಯಿತ ಪರಿಷತ್ ಸದಸ್ಯರ ಬಲದೊಂದಿಗೆ ಕೈ ಪಕ್ಷವು ಒಟ್ಟು 30 ಸದಸ್ಯ ಬಲ ಹೊಂದಿದೆ. ಬಿಜೆಪಿ 22 ಪಾಲಿಕೆ ಸದಸ್ಯರು ಮತ್ತು ಸಂಸದ ಉಮೇಶ್ ಜಾಧವ್, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್, ಗ್ರಾಮೀಣ ಶಾಸಕ‌ ಬಸವರಾಜ್ ಮತ್ತಿಮೂಡ್ ಹಾಗು MLC ಸಾಬಣ್ಣ ತಳವಾರ, ಬಿ.ಜಿ.ಪಾಟೀಲ್, ಶಶೀಲ್‌ ಜಿ. ನಮೋಶಿ, ಸುನೀಲ್ ವಲ್ಯಾಪುರೆ, ತುಳಸಿ‌ ಮುನಿರಾಜು, ರಘುನಾಥ್ ಮಲ್ಕಾಪುರೆ, ಲಕ್ಷ್ಮಣ್ ಸವದಿ ಹಾಗು ಭಾರತಿ ಶೆಟ್ಟಿ ಸೇರಿ ಒಟ್ಟು 34 ಸದಸ್ಯರ ಬಲವಿದೆ.

ಕಿಂಗ್ ಮೇಕರ್ ಸ್ಥಾನದಲ್ಲಿ ಜೆಡಿಎಸ್​: 4 ಸದಸ್ಯ ಬಲ ಹೊಂದಿರುವ ಜೆಡಿಎಸ್ ಕಿಂಗ್ ಮೇಕರ್ ಸ್ಥಾನದಲ್ಲಿದೆ. 34 ಸದಸ್ಯ ಬಲದ ಬಿಜೆಪಿ ಈ ಸಲ ಪಾಲಿಕೆಯಲ್ಲಿ ಅಧಿಕಾರ ನಡೆಸಲು ಸಜ್ಜಾಗಿದೆ. ಮ್ಯಾಜಿಕ್ ನಂಬರ್ 35 ತಲುಪಲು ಬಿಜೆಪಿಗೆ ಒಂದು ಸದಸ್ಯ ಬಲ ಕಡಿಮೆ ಇದ್ದು, ಜೆಡಿಎಸ್ ಬೆಂಬಲ ಪಡೆಯಲು ಹವಣಿಸುತ್ತಿದೆ. ಹಾಗಾಗಿ, ಕಲಬುರಗಿ ಪಾಲಿಕೆ ಮೇಲೆ ಕೇಸರಿ ಪತಾಕೆ ಹಾರಿಸಿ ಅಧಿಕಾರ ನಡೆಸಲು ಬಿಜೆಪಿ ಸಂಪೂರ್ಣವಾಗಿ ಸಜ್ಜಾಗಿದೆ. ಮತ್ತೊಂದೆಡೆ, ಹೇಗಾದರೂ ಮಾಡಿ ಪಾಲಿಕೆ ಗದ್ದುಗೆ ಏರಲು ಕಾಂಗ್ರೆಸ್ ಕೂಡಾ ಗೇಮ್ ಪ್ಲ್ಯಾನ್ ರೂಪಿಸುತ್ತಿದೆ. 30 ಸದಸ್ಯ ಬಲ ಹೊಂದಿರುವ ಕೈಪಡೆ, ಜೆಡಿಎಸ್ ಸಪೋರ್ಟ್​ನೊಂದಿಗೆ ಪಾಲಿಕೆಯಲ್ಲಿ ಆಡಳಿತ ನಡೆಸುವ ವಿಶ್ವಾಸದಲ್ಲಿದೆ.

ಪಾಲಿಕೆ ಚುನಾವಣೆ ನಡೆದಾಗ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿರಲಿಲ್ಲ. ಹೀಗಾಗಿ ಬಿಜೆಪಿ ಹೊರಗಿನ ಪರಿಷತ್ ಸದಸ್ಯರ ಹೆಸರುಗಳನ್ನು ಮತದಾರ ಪಟ್ಟಿಯಲ್ಲಿ ಸೇರಿಸಿತ್ತು. ಇದನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಗಿತ್ತು. ಕೊನೆಗೆ ಹೈಕೋರ್ಟ್ 6 ಪರಿಷತ್ ಸದಸ್ಯರನ್ನು ಮತದಾನಕ್ಕೆ ಅರ್ಹವೆಂದು ತೀರ್ಪಿತ್ತು ಆದೇಶ ಹೊಡಿಸಿದ ಬಳಿಕ ಪಾಲಿಕೆ ಸದಸ್ಯರ ಚುನಾವಣೆ ನಡೆದು ಒಂದೂವರೆ ವರ್ಷದ ಬಳಿಕ ಮೇಯರ್, ಉಪಮೇಯರ್ ಎಲೆಕ್ಷನ್ ನಡೆಯುತ್ತಿದೆ.

ಜೆಡಿಎಸ್ ನಡೆ ನಿಗೂಢ: ಈವರೆಗೂ ಕಾಂಗ್ರೆಸ್, ಬಿಜೆಪಿ ಯಾವುದಕ್ಕೂ ಬೆಂಬಲ ಸೂಚಿಸದ ಜೆಡಿಎಸ್ ತಟಸ್ಥವಾಗಿದೆ. ತೆನೆ ಪಕ್ಷ ಯಾರ ಕೈ ಹಿಡಿಯುತ್ತೋ ಆ ಪಕ್ಷ ಪಾಲಿಕೆಯಲ್ಲಿ ಆಡಳಿತ ನಡೆಸಲಿದೆ. ಆದರೆ ಸದ್ಯದ ಮಟ್ಟಿಗೆ 'ದಳ'ಪತಿಗಳು ಯಾರಿಗೆ ಸಾಥ್ ಕೊಡ್ತಾರೆ ಅನ್ನೋದು ನಿಗೂಢವಾಗಿದೆ.

ವಿಧಾನಸಭಾ ಚುನಾವಣೆ ಹತ್ತಿರ ಇರುವ ಕಾರಣ ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವ ಸಾಧ್ಯತೆಗಳಿವೆ. ಬಿಜೆಪಿಗೆ ಜೆಡಿಎಸ್ ಸಪೋರ್ಟ್ ಮಾಡಿದ್ರೆ ನಿರಾಯಾಸವಾಗಿ ಬಿಜೆಪಿ ಗೆದ್ದು ಬೀಗಲಿದೆ. ಒಂದುವೇಳೆ ಕಾಂಗ್ರೆಸ್​ಗೆ ಜೆಡಿಎಸ್ ಬೆಂಬಲ ನೀಡಿದ್ರೆ ಕಾಂಗ್ರೆಸ್ 34, ಬಿಜೆಪಿ 34 ಸದಸ್ಯರ ಸಮಬಲ ಆಗಲಿದ್ದು ಟಾಸ್ ಮುಖಾಂತರ ಮೇಯರ್, ಉಪಮೇಯರ್ ಚುನಾವಣೆ ನಡೆಯಬೇಕಿದೆ.

ಇದನ್ನೂ ಓದಿ: ಪಕ್ಷ ಸೇರಿದರೂ ಚಿಂಚನಸೂರು ಭೇಟಿಗೆ ಅವಕಾಶ ನೀಡದ ಖರ್ಗೆ.. ಕಲಬುರಗಿಯಲ್ಲಿ ಅಭಿಮಾನಿಗಳ ಅಸಮಾಧಾನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.