ಕಲಬುರಗಿ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಾಗಿ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದಲ್ಲಿ ಕೌಶಲ್ಯ ತರಬೇತಿ ಅಲ್ಪಸಂಖ್ಯಾತ ಮಹಿಳೆಯರು ಬಟ್ಟೆಯಿಂದ ಮಾಸ್ಕ್ ತಯಾರಿಸಿ ಊಚಿತ ವಿತರಣೆ ಮಾಡುತ್ತಿದ್ದಾರೆ.
ಕರ್ನಾಟಕ ಕೌಶಲ್ಯ ತರಬೇತಿ ಕೇಂದ್ರವೂ ವಾಡಿ ಪಟ್ಟಣದ ಅಲ್ಪಸಂಖ್ಯಾತ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುತ್ತಿದೆ. ಮುಸ್ಲಿಂ ಮಹಿಳೆಯರು ಊಚಿತವಾಗಿ ಕಾಟನ್ ಬಟ್ಟೆಯಿಂದ ಮಾಸ್ಕ್ ತಯಾರಿಸಿ ವಿತರಿಸುತ್ತಿದ್ದಾರೆ. ಸಂಸ್ಥೆಯ ಕಾರ್ಯಕ್ಕೆ ಪಿಎಸ್ಐ ವಿಜಯಕುಮಾರ ಬಾವಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಹಿತದೃಷ್ಟಿಯಿಂದ ಎರಡೂವರೆ ಸಾವಿರ ಮಾಸ್ಕ್ ಉಚಿತವಾಗಿ ವಿತರಿಸಲಾಗುತ್ತಿದೆ. ಬಳಿಕ ಯಾವುದೇ ಸಂಘ ಸಂಸ್ಥೆಗಳು ಖರೀದಿಸಲು ಮುಂದೆ ಬಂದ್ರೆ, ಕಡಿಮೆ ದರದಲ್ಲಿ ತಯಾರಿಸಿ ಕೊಡುವುದಾಗಿ ತರಬೇತಿ ಕೇಂದ್ರದ ಮುಖ್ಯಸ್ಥ ಮಹಮ್ಮದ್ ಹಿಮ್ತಿಯಾಜ್ ತಿಳಿಸಿದ್ದಾರೆ.