ETV Bharat / state

ಕೊರೊನಾ 2ನೇ ಅಲೆಗೆ ಬ್ರೇಕ್​ ಹಾಕಲು ಸ್ವತಃ ಫೀಲ್ಡ್​ಗಿಳಿದ ಡಿಸಿ! - Kalaburagi DC Conduct corona awerness programe due to the covid 2nd phase

ಜಿಲ್ಲೆಯಲ್ಲಿ ಕೊರೊನಾ ಅಲೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಸಹಕರಿಸಬೇಕು. ಸಾಮಾಜಿಕ ಅಂತರ, ಮಾಸ್ಕ್​, ಸ್ಯಾನಿಟೈಸರ್​ನ ತಪ್ಪದೇ ಬಳಸಬೇಕು. ಸೋಂಕಿತರ ಸಂಪರ್ಕದಲ್ಲಿದ್ದವರು ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ಕೊಟ್ಟು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ..

kalaburagi-dc-conduct-corona-awerness-programe-due-to-the-covid-2nd-phase
ಕೊರೊನಾ 2ನೇ ಅಲೆಗೆ ಬ್ರೇಕ್​ ಹಾಕಲು ಸ್ವತಃ ಫೀಲ್ಡ್​ಗಿಳಿದ ಡಿಸಿ
author img

By

Published : Mar 19, 2021, 5:48 PM IST

ಕಲಬುರಗಿ : ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ಆರ್ಭಟಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾಧಿಕಾರಿ ವಿಜಯ ವಿ ಜೋತ್ಸ್ನಾ ಮತ್ತು ನಗರ ಪೊಲೀಸ್ ಆಯುಕ್ತ ಎನ್ ಸತೀಶ್ ಕುಮಾರ್​ ಸ್ವತಃ ಫೀಲ್ಡ್​ಗಿಳಿದು ಜಾಗೃತಿ ಮೂಡಿಸಿದ್ದಾರೆ.

ಕೊರೊನಾ ವೈರಸ್​ ಕುರಿತು ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ ವಿಜಯ ವಿ ಜೋತ್ಸ್ನಾ

ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸಾಕಷ್ಟು ಬಾರಿ ಹೇಳಿದ್ರೂ ಜನ ಮಾತ್ರ ನಿರ್ಲಕ್ಷ್ಯವಹಿಸುತ್ತಿರುವುದನ್ನ ಮನಗಂಡ ಜಿಲ್ಲಾಡಳಿತ ಇವತ್ತು ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.

ನಗರದ ಜಗತ್ ವೃತ್ತ ಮತ್ತು ಸೂಪರ್ ಮಾರ್ಕೆಟ್​ನಲ್ಲಿ ರೌಂಡ್ಸ್ ಹೊಡೆದ ಅಧಿಕಾರಿ ವರ್ಗ, ಬೈಕ್ ಸವಾರರಿಗೆ, ಪಾದಚಾರಿಗಳಿಗೆ, ನಗರ ಸಾರಿಗೆ ಬಸ್ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಕೋವಿಡ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಮಾಸ್ಕ್ ಹಾಕದವರಿಗೆ ಎಚ್ಚರಿಕೆಯ ಸಂದೇಶವಾಗಿ 250 ರೂ. ದಂಡ ವಿಧಿಸಿದ್ದಾರೆ.

ಓದಿ: ಸಿಡಿ ಪ್ರಕರಣದ ತನಿಖೆ: ನರೇಶ್​ಗೌಡ ಬ್ಯಾಂಕ್‌ ಖಾತೆಯಲ್ಲಿ ಸಿಕ್ಕಿದ್ದು ಬರೇ 2.28 ರೂಪಾಯಿ.!

ಡಿಸಿ ವಿಜಯ ವಿ ಜೋತ್ಸ್ನಾ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಅಲೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಸಹಕರಿಸಬೇಕು. ಸಾಮಾಜಿಕ ಅಂತರ, ಮಾಸ್ಕ್​, ಸ್ಯಾನಿಟೈಸರ್​ನ ತಪ್ಪದೇ ಬಳಸಬೇಕು.

ಸೋಂಕಿತರ ಸಂಪರ್ಕದಲ್ಲಿದ್ದವರು ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ಕೊಟ್ಟು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ ಎಂದು ಸೂಚಿಸಿದರು. ನಂತರ ನಗರ ಪೊಲೀಸ್ ಕಮಿಷನರ್ ಕೂಡ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮನವಿ‌ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.