ಕಲಬುರಗಿ: ಫೈರ್ ಎನ್.ಓ.ಸಿ ನೀಡಲು ಲಂಚ ಪಡೆಯುತ್ತಿರುವ ವೇಳೆ ಅಗ್ನಿಶಾಮಕ ದಳದ ಪ್ರಾದೇಶಿಕ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ನಗರದಲ್ಲಿ ನಡೆದಿದೆ.
ಲಕ್ಕಪ್ಪ ಎಸಿಬಿ ಬಲೆಗೆ ಬಿದ್ದ ಕಲಬುರಗಿ ಅಗ್ನಿಶಾಮಕ ಪ್ರಾದೇಶಿಕ ಅಧಿಕಾರಿ. ಇವರು ಹೊಸ ಕಾಲೇಜು ಪ್ರಾರಂಭಿಸಲು ಫೈರ್ ಎನ್ಓಸಿ ನೀಡಲು ನಾಗರಾಜ್ ಎಂಬುವವರಿಂದ 75 ಸಾವಿರ ರೂ ಹಣ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ತಮ್ಮ ಕಚೇರಿಯಲ್ಲಿಯೇ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.